Judges 15:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಂಸೋನನು ಆ ಪಂಜುಗಳಿಗೆ ಬೆಂಕಿ ಹಚ್ಚಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಿದ್ದ ಹೊಲಗಳಲ್ಲಿ ಓಡಾಡಲು ಬಿಟ್ಟನು. ಈ ರೀತಿ ಅವನು ಅವರ ಹೊಲಗಳಲ್ಲಿ ಬೆಳೆದ ಪೈರನ್ನೂ ಮತ್ತು ಅವರು ಕೊಯ್ದುಹಾಕಿದ ತೆನೆಗೂಡುಗಳನ್ನೂ ಸುಟ್ಟುಹಾಕಿದನು. ಅವನು ಅವರ ದ್ರಾಕ್ಷಿಯ ತೋಟಗಳನ್ನು ಮತ್ತು ಆಲಿವ್ ಮರಗಳನ್ನು ಸುಟ್ಟುಹಾಕಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ನರಿಗಳನ್ನು ಫಿಲಿಷ್ಟಿಯರ ಹೊಲಗಳಲ್ಲಿ ಬಿಟ್ಟು, ಅವರ ತೆನೆಗೂಡುಗಳನ್ನೂ, ಇನ್ನೂ ಕೊಯ್ಯದೆ ಇದ್ದ ಬೆಳೆಯನ್ನೂ, ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.
Kannada BSI Bible 2016
ಅದಕ್ಕೆ ಬೆಂಕಿಹಚ್ಚಿ ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು ತೆನೆ ಗೂಡುಗಳನ್ನೂ ಪೈರುಗಳನ್ನೂ ದ್ರಾಕ್ಷೇತೋಟಗಳನ್ನೂ ಇಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಪಂಜುಗಳಿಗೆ ಬೆಂಕಿಹೊತ್ತಿಸಿ ಆ ನರಿಗಳನ್ನು ಫಿಲಿಷ್ಟಿಯರ ಪೈರುಗಳಲ್ಲಿ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಎಣ್ಣೆಯ ಮರಗಳ ತೋಟಗಳನ್ನೂ ಸುಟ್ಟುಬಿಟ್ಟನು.
Kannada Bible (KNCL) BSI 2016
ಆ ನರಿಗಳನ್ನು ‘ಫಿಲಿಷ್ಟಿಯರ ಬೆಳೆ ತುಂಬಿದ ಹೊಲಗಳಿಗೆ ಬಿಟ್ಟು ಅವರ ತೆನೆಗೂಡುಗಳನ್ನೂ ಇನ್ನೂ ಕೊಯ್ಯದೆ ಇದ್ದ ಪೈರುಗಳನ್ನೂ ಸುಟ್ಟುಬಿಟ್ಟನು. ಎಣ್ಣೆಯ ಮರಗಳ ತೋಟಗಳು ಸಹ ಸುಟ್ಟುಹೋದವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾಲಗಳಿಗೆ ಬೆಂಕಿ ಹಚ್ಚಿ, ಅವುಗಳನ್ನು ಫಿಲಿಷ್ಟಿಯರ ಪೈರಿನಲ್ಲಿ ಕಳುಹಿಸಿಬಿಟ್ಟು, ತೆನೆ ಗೂಡುಗಳನ್ನೂ, ಪೈರುಗಳನ್ನೂ, ದ್ರಾಕ್ಷಿತೋಟಗಳನ್ನೂ, ಹಿಪ್ಪೆಯ ತೋಪುಗಳನ್ನೂ ಕೂಡ ಸುಟ್ಟುಬಿಟ್ಟನು.