Judges 15:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರ ಮೇಲೆ ಆಕ್ರಮಣ ಮಾಡಿ ಅವರಲ್ಲಿ ಅನೇಕರನ್ನು ಕೊಂದುಹಾಕಿದನು. ಆಮೇಲೆ ಅವನು ಹೋಗಿ ಒಂದು ಗುಹೆಯಲ್ಲಿ ಇದ್ದುಬಿಟ್ಟನು. ಆ ಗುಹೆಯು ಏಟಾಮಿನ ಬಂಡೆಯ ಬಳಿಯಲ್ಲಿತ್ತು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರ ತೊಡೆ, ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿ, ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
Kannada BSI Bible 2016
ಅವನು ಅವರ ತೊಡೆ ಸೊಂಟಗಳನ್ನು ಹೊಡೆದು ದೊಡ್ಡ ಸಂಹಾರಮಾಡಿ ತಾನು ಹೋಗಿ ಏಟಾಮ್ ಬಂಡೆಯ ಮೇಲೆ ವಾಸವಾಗಿದ್ದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರ ತೊಡೆ ಸೊಂಟಗಳನ್ನು ಮುರಿದು ಅವರನ್ನು ಸಂಹರಿಸಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
Kannada Bible (KNCL) BSI 2016
ಅವರ ತೊಡೆ ಸೊಂಟಗಳನ್ನು ಮುರಿದು, ಅವರನ್ನು ಸಂಹರಿಸಿಬಿಟ್ಟನು. ಅನಂತರ ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರ ಮೇಲೆ ಬಲವಾಗಿ ಬಿದ್ದು, ಅವರಲ್ಲಿ ಅನೇಕರನ್ನು ಕೊಂದುಹಾಕಿ ತಾನು ಹೋಗಿ ಏಟಾಮ್ ಗಿರಿಯ ಗುಹೆಯಲ್ಲಿ ವಾಸಮಾಡಿದನು.