Judges 16:10 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಸುಳ್ಳು ಹೇಳಿದೆ, ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವದು ಹೇಗೆಂಬುದನ್ನು ದಯವಿಟ್ಟು ಹೇಳು” ಎಂದು ಕೇಳಿದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೆಲೀಲಳು ತಿರುಗಿ ಸಂಸೋನನಿಗೆ, “ನೀನು ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ದಯವಿಟ್ಟು ನನಗೆ ತಿಳಿಸು” ಎಂದಳು.
Kannada BSI Bible 2016
ದೆಲೀಲಳು ಸಂಸೋನನಿಗೆ--ಇಗೋ, ನೀನು ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ಈಗ ನೀನು ಯಾವದರಿಂದ ಕಟ್ಟಲ್ಪಡಬಹುದೋ ನನಗೆ ದಯಮಾಡಿ ತಿಳಿಸು ಅಂದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೆಲೀಲಳು ತಿರಿಗಿ ಸಂಸೋನನಿಗೆ - ನೀನು ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂಬದನ್ನು ದಯವಿಟ್ಟು ನನಗೆ ತಿಳಿಸು ಎಂದಳು.
Kannada Bible (KNCL) BSI 2016
ದೆಲೀಲಳು ಮತ್ತೊಮ್ಮೆ ಸಂಸೋನನಿಗೆ, “ನೀವು ನನ್ನನ್ನು ವಂಚಿಸಿದಿರಿ; ಸುಳ್ಳಾಡದೆ ನಿಮ್ಮನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ದಯವಿಟ್ಟು ನನಗೆ ತಿಳಿಸಿ,” ಎಂದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ದೆಲೀಲಳು ಸಂಸೋನನಿಗೆ, “ನೀನು ನನ್ನನ್ನು ವಂಚನೆಮಾಡಿ, ನನಗೆ ಸುಳ್ಳು ಹೇಳಿದೆ. ಈಗ ನಿನ್ನನ್ನು ಯಾವುದರಿಂದ ಕಟ್ಟಬಹುದೆಂಬುದನ್ನು ನನಗೆ ದಯಮಾಡಿ ತಿಳಿಸು,” ಎಂದಳು.