Judges 16:13 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ದೆಲೀಲಳು ಸಂಸೋನನಿಗೆ, “ನೀನು ನನಗೆ ಪುನಃ ಸುಳ್ಳು ಹೇಳಿದೆ. ನೀನು ನನ್ನನ್ನು ವಂಚಿಸಿದೆ. ನಿನ್ನನ್ನು ಬಂಧಿಸುವುದು ಹೇಗೆಂಬುದನ್ನು ಈಗ ನನಗೆ ತಿಳಿಸು” ಎಂದು ಕೇಳಿದಳು. ಸಂಸೋನನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದು ಕಟ್ಟಿದರೆ ನಾನು ಬೇರೆ ಮನುಷ್ಯರಂತೆ ದುರ್ಬಲನಾಗುತ್ತೇನೆ” ಎಂದು ಹೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ದೆಲೀಲಳು ಸಂಸೋನನಿಗೆ “ನೀನು ತಿರುಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವುದರಿಂದ ಕಟ್ಟಬಹುದೆಂದು ತಿಳಿಸು” ಅನ್ನಲು ಅವನು, “ನನ್ನ ತಲೆಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು” ಎಂದು ಹೇಳಿದನು.
Kannada BSI Bible 2016
ದೆಲೀಲಳು ಸಂಸೋನನಿಗೆ--ಈ ವರೆಗೂ ನನ್ನನ್ನು ವಂಚನೆಮಾಡಿ ನನಗೆ ಸುಳ್ಳುಗಳನ್ನು ಹೇಳಿದಿ. ನೀನು ಯಾವದರಿಂದ ಕಟ್ಟಲ್ಪಡಬಹುದೋ ತಿಳಿಸು ಅಂದಳು. ಅವನು ಅವಳಿಗೆ--ನೀನು ನನ್ನ ತಲೆಯ ಏಳು ಜಡೆ ಗಳನ್ನು ಮಗ್ಗದಲ್ಲಿ ನೆಯ್ದರೆ ಆಗುವದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ದೆಲೀಲಳು ಸಂಸೋನನಿಗೆ - ನೀನು ತಿರಿಗಿ ನನ್ನನ್ನು ವಂಚಿಸಿದಿ; ಸುಳ್ಳಾಡಿದಿ; ನಿನ್ನನ್ನು ಯಾವದರಿಂದ ಕಟ್ಟಬಹುದೆಂದು ತಿಳಿಸು ಅನ್ನಲು ಅವನು - ನನ್ನ ತಲೇಕೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯಿದರೆ ಸಾಕು ಎಂದು ಹೇಳಿದನು.
Kannada Bible (KNCL) BSI 2016
ಆಗ ದೆಲೀಲಳು ಸಂಸೋನನಿಗೆ, “ನೀವು ತಿರುಗಿ ನನ್ನನ್ನು ವಂಚಿಸಿದಿರಿ, ಸುಳ್ಳಾಡಿದಿರಿ; ನಿಮ್ಮನ್ನು ಯಾವುದರಿಂದ ಕಟ್ಟಬಹುದೆಂದು ತಿಳಿಸಿ,” ಎನ್ನಲು ಅವನು, “ನನ್ನ ತಲೆಗೂದಲಿನ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದರೆ ಸಾಕು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದೆಲೀಲಳು ಸಂಸೋನನಿಗೆ, “ಈವರೆಗೂ ನನ್ನನ್ನು ವಂಚನೆಮಾಡಿ, ನನಗೆ ಸುಳ್ಳುಗಳನ್ನು ಹೇಳಿದೆ. ನಿನ್ನನ್ನು ಯಾವುದರಿಂದ ಕಟ್ಟಬಹುದೋ ತಿಳಿಸು,” ಎಂದಳು. ಅವನು ಅವಳಿಗೆ, “ನೀನು ನನ್ನ ತಲೆಯ ಏಳು ಜಡೆಗಳನ್ನು ಮಗ್ಗದಲ್ಲಿ ನೇಯ್ದರೆ ಆಗುವುದು,” ಎಂದನು.