Judges 16:19 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಸಂಸೋನನು ಅವಳ ತೊಡೆಯ ಮೇಲೆ ಮಲಗಿ ನಿದ್ರೆಮಾಡಿದನು. ಆಗ ಅವಳು ಸಂಸೋನನ ಏಳುಜಡೆಗಳನ್ನು ಬೋಳಿಸಲು ಒಬ್ಬ ಮನುಷ್ಯನನ್ನು ಒಳಗೆ ಕರೆದಳು. ಅವನು ಆ ಏಳು ಜಡೆಗಳನ್ನು ಬೋಳಿಸಲು, ಅವನು ಇತರರಂತೆ ದುರ್ಬಲನಾದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ, ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಅವನನ್ನು ಬಿಟ್ಟು ಹೋಯಿತು,
Kannada BSI Bible 2016
ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆಹೋಗುವಂತೆ ಮಾಡಿ ಒಬ್ಬನನ್ನು ಕರೆದು ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ ಅವನನ್ನು ಬಾಧಿ ಸುವದಕ್ಕೆ ಪ್ರಾರಂಭಿಸಿದಳು. ಆಗ ಅವನ ಶಕ್ತಿ ಅವ ನನ್ನು ಬಿಟ್ಟುಹೋಯಿತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ ಅವನನ್ನು ದುರ್ಬಲಪಡಿಸಿದಳು. ಅವನ ಶಕ್ತಿಯು ಹೋಯಿತು,
Kannada Bible (KNCL) BSI 2016
ಆಕೆ ಸಂಸೋನನನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಅವನಿಗೆ ನಿದ್ರೆಹತ್ತಿದಾಗ ಒಬ್ಬ ಮನುಷ್ಯನಿಂದ ಅವನ ತಲೆಯ ಏಳು ಜಡೆಗಳನ್ನು ಬೋಳಿಸಿ ಅವನನ್ನು ದುರ್ಬಲಪಡಿಸಿದಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳು ಅವನನ್ನು ತನ್ನ ತೊಡೆಗಳ ಮೇಲೆ ನಿದ್ರೆ ಹೋಗುವಂತೆ ಮಾಡಿ, ಒಬ್ಬನನ್ನು ಕರೆದು, ಅವನ ತಲೆಯ ಏಳು ಜಡೆಗಳನ್ನು ಬೋಳಿಸುವಂತೆ ಮಾಡಿ, ಅವನನ್ನು ದುರ್ಬಲಪಡಿಸಿದಳು. ಆಗ ಅವನ ಶಕ್ತಿ ಅವನನ್ನು ಬಿಟ್ಟುಹೋಯಿತು.