Judges 16:30 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಈ ಫಿಲಿಷ್ಟಿಯರ ಜೊತೆ ನಾನೂ ಸಾಯಲು ಸಿದ್ಧ” ಎಂದು ಹೇಳಿ ಆ ಎರಡೂ ಕಂಬಗಳನ್ನು ತನ್ನ ಎಲ್ಲಾ ಶಕ್ತಿಯಿಂದ ಎಳೆಯುತ್ತಾ ಬಾಗಿದನು. ಆಗ ಮಂದಿರವು ಅಧಿಪತಿಗಳ ಮೇಲೂ ಅಲ್ಲಿದ್ದ ಜನರೆಲ್ಲರ ಮೇಲೂ ಕುಸಿದು ಬಿತ್ತು. ಈ ಪ್ರಕಾರ ಸಂಸೋನನು ತಾನು ಜೀವದಿಂದಿದ್ದಾಗ ಕೊಂದ ಜನರಿಗಿಂತ ಹೆಚ್ಚು ಜನರನ್ನು ತಾನು ಸಾಯುವಾಗ ಕೊಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆಗ ಅ ಕಟ್ಟಡವು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಾಗಿತ್ತು.
Kannada BSI Bible 2016
ನನ್ನ ಪ್ರಾಣವು ಫಿಲಿಷ್ಟಿಯರ ಸಂಗಡ ಸಾಯಲಿ ಎಂದು ಹೇಳಿ ತನ್ನ ಶಕ್ತಿ ಇದ್ದ ಮಟ್ಟಿಗೂ ಬಾಗಿದನು. ಆಗ ಮನೆಯು ಅಧಿಪತಿಗಳ ಮೇಲೆಯೂ ಅದರಲ್ಲಿದ ಎಲ್ಲಾ ಜನರ ಮೇಲೆಯೂ ಬಿತ್ತು. ಹೀಗೆ ಅವನು ಸಾಯುವಾಗ ಕೊಂದ ಜನರು ಅವನು ಬದುಕುವಾಗ ಕೊಂದ ಜನರಿಗಿಂತ ಹೆಚ್ಚಾಗಿದ್ದರು.ಅವನ ಸಹೋದರರೂ ಅವನ ತಂದೆಯ ಮನೆಯವರೆಲ್ಲರೂ ಹೋಗಿ ಅವನನ್ನು ತಕ್ಕೊಂಡು ಬಂದು ಚೊರ್ಗಕ್ಕೂ ಎಷ್ಟಾವೋಲಿಗೂ ನಡುವೆ ಅವನ ತಂದೆ ಯಾದ ಮಾನೋಹನ ಸಮಾಧಿಯಲ್ಲಿ ಅವನನ್ನು ಹೂಣಿಟ್ಟರು. ಅವನು ಇಸ್ರಾಯೇಲಿಗೆ ಇಪ್ಪತ್ತು ವರುಷ ನ್ಯಾಯತೀರಿಸಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವುಗಳನ್ನು ಒತ್ತಿ ನಾನೂ ಫಿಲಿಷ್ಟಿಯರ ಸಂಗಡ ಸಾಯುವೆನು ಎಂದು ಹೇಳಿ ಬಲವಾಗಿ ಬಾಗಿಕೊಳ್ಳಲು ಮನೆಯು ಅಧಿಪತಿಗಳ ಮೇಲೆಯೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೆಯೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದುಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.
Kannada Bible (KNCL) BSI 2016
“ನಾನು ಫಿಲಿಷ್ಟಿಯರ ಸಂಗಡ ಸಾಯುವೆನು,” ಎಂದು ಹೇಳಿ ಬಲವಾಗಿ ಬಾಗಿಕೊಂಡನು. ಆ ಮನೆಯು ಅಧಿಪತಿಗಳ ಮೇಲೂ ಅಲ್ಲಿ ಬಂದಿದ್ದ ಎಲ್ಲಾ ಜನರ ಮೇಲೂ ಬಿದ್ದಿತು. ಅವನು ಜೀವದಿಂದಿದ್ದಾಗ ಕೊಂದು ಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆಯೇ ಹೆಚ್ಚಿತ್ತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನನ್ನ ಪ್ರಾಣವು ಫಿಲಿಷ್ಟಿಯರ ಸಂಗಡ ಸಾಯಲಿ,” ಎಂದು ಹೇಳಿ ತನ್ನ ಶಕ್ತಿಯಿದ್ದ ಮಟ್ಟಿಗೂ ಬಾಗಿದನು. ಆಗ ಮನೆಯು ಅಧಿಪತಿಗಳ ಮೇಲೆಯೂ, ಅದರಲ್ಲಿದ್ದ ಎಲ್ಲಾ ಜನರ ಮೇಲೆಯೂ ಬಿತ್ತು. ಹೀಗೆ ಸಂಸೋನನು ಬದುಕಿದ್ದಾಗ ಕೊಂದ ಜನರಿಗಿಂತಲೂ ಮರಣಹೊಂದುವಾಗ ಕೊಂದ ಜನರ ಸಂಖ್ಯೆಯೇ ಹೆಚ್ಚಾಗಿತ್ತು.