Judges 18:1 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಕಾಲದಲ್ಲಿ ಇಸ್ರೇಲರಿಗೆ ಅರಸನಿರಲಿಲ್ಲ. ಆ ಸಮಯದಲ್ಲಿ ದಾನ್ ಕುಲದವರು ಇನ್ನೂ ತಮ್ಮ ವಾಸಕ್ಕಾಗಿ ಒಂದು ಸ್ಥಳವನ್ನು ಹುಡುಕುತ್ತಿದ್ದರು. ಇನ್ನೂ ಅವರಿಗೆ ತಮ್ಮದೇ ಆದ ಒಂದು ಪ್ರದೇಶವೂ ಇರಲಿಲ್ಲ. ಇಸ್ರೇಲಿನ ಬೇರೆ ಕುಲಗಳಿಗೆ ತಮ್ಮದೇ ಆದ ಪ್ರದೇಶ ಇತ್ತು. ಆದರೆ ದಾನ್ ಕುಲದವರು ಮಾತ್ರ ಇನ್ನೂ ತಮ್ಮ ಪ್ರದೇಶವನ್ನು ಹೊಂದಿಕೊಂಡಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಕಾಲದಲ್ಲಿ ಇಸ್ರಾಯೇಲರೊಳಗೆ ಅರಸನಿರಲಿಲ್ಲ. ದಾನ್ ಕುಲದವರಿಗೆ ಆ ವರೆಗೂ ಇಸ್ರಾಯೇಲರಲ್ಲಿ ಸ್ವತ್ತು ದೊರಕಿರಲಿಲ್ಲ, ಅವರು ತಮಗೋಸ್ಕರ ವಾಸಸ್ಥಳವನ್ನು ಹುಡುಕುತ್ತಿದ್ದರು.
Kannada BSI Bible 2016
ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವದಕ್ಕೆ ತಮಗೆ ಬಾಧ್ಯತೆ ಯನ್ನು ಹುಡುಕುತ್ತಿದ್ದರು. ಯಾಕಂದರೆ ಅಂದಿನ ವರೆಗೆ ಅವರಿಗೆ ಇಸ್ರಾಯೇಲ್‌ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರಕಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಕಾಲದಲ್ಲಿ ಇಸ್ರಾಯೇಲ್ಯರೊಳಗೆ ಅರಸನಿರಲಿಲ್ಲ. ದಾನ್‍ಕುಲದವರಿಗೆ ಆವರೆಗೂ ಇಸ್ರಾಯೇಲ್ಯರಲ್ಲಿ ಸ್ವಾಸ್ತ್ಯವು ಸಿಕ್ಕದ್ದರಿಂದ ಅವರು ತಮಗೋಸ್ಕರ ವಾಸಸ್ಥಳವನ್ನು ಹುಡುಕುತ್ತಿದ್ದರು.
Kannada Bible (KNCL) BSI 2016
ಆ ಕಾಲದಲ್ಲಿ ಇಸ್ರಯೇಲರಿಗೆ ಅರಸನಿರಲಿಲ್ಲ. ದಾನ್ ಕುಲದವರಿಗೆ ಆವರೆಗೂ ಇಸ್ರಯೇಲರಲ್ಲಿ ಆಸ್ತಿಪಾಸ್ತಿ ಸಿಕ್ಕದೆ ಇದ್ದುದರಿಂದ ಅವರು ತಮಗಾಗಿ ವಾಸಸ್ಥಳವನ್ನು ಹುಡುಕುತ್ತಿದ್ದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ದಿವಸಗಳಲ್ಲಿ ಇಸ್ರಾಯೇಲಿನೊಳಗೆ ಅರಸನಿರಲಿಲ್ಲ. ಆ ದಿವಸಗಳಲ್ಲಿ ದಾನನ ಗೋತ್ರದವರು ವಾಸವಾಗಿರುವುದಕ್ಕೆ ತಮಗೆ ಬಾಧ್ಯತೆಯನ್ನು ಹುಡುಕುತ್ತಿದ್ದರು. ಏಕೆಂದರೆ ಅಂದಿನವರೆಗೆ ಅವರಿಗೆ ಇಸ್ರಾಯೇಲ್ ಗೋತ್ರಗಳಲ್ಲಿ ಪೂರ್ಣವಾಗಿ ಬಾಧ್ಯತೆ ದೊರೆತಿರಲಿಲ್ಲ.