Judges 18:14 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡಲು ಹೋಗಿದ್ದ ಐದು ಜನರು ತಮ್ಮ ಬಂಧುಗಳಿಗೆ, “ಇಲ್ಲಿಯ ಒಂದು ಮನೆಯಲ್ಲಿ ಏಫೋದ್ ಇದೆ; ಮನೆದೇವರುಗಳೂ ಇವೆ. ಕೆತ್ತಿ ಮಾಡಿರುವ ಒಂದು ವಿಗ್ರಹವೂ ಇದೆ. ಈಗ ನೀವು ಹೋಗಿ ಅವುಗಳನ್ನು ತೆಗೆದುಕೊಂಡು ಬನ್ನಿರಿ” ಎಂದು ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ, “ಈ ಗ್ರಾಮದಲ್ಲಿ ಒಂದು ಏಫೋದೂ, ದೇವತಾಪ್ರತಿಮೆಗಳೂ, ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬುದು ನಿಮಗೆ ಗೊತ್ತುಂಟೋ?
Kannada BSI Bible 2016
ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಲಯಿಷ್ ದೇಶವನ್ನು ಸಂಚರಿಸಿ ನೋಡುವದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ - ಈ ಗ್ರಾಮದಲ್ಲಿ ಒಂದು ಏಫೋದೂ ದೇವತಾಪ್ರತಿಮೆಗಳೂ ಕೆತ್ತನೆಯ ಮತ್ತು ಎರಕದ ವಿಗ್ರಹಗಳೂ ಇರುತ್ತವೆಂಬದು ನಿಮಗೆ ಗೊತ್ತುಂಟೋ?
Kannada Bible (KNCL) BSI 2016
ಲಯಿಷ್ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಐದು ಮಂದಿ ತಮ್ಮ ಬಂಧುಗಳಿಗೆ, “ಈ ಗ್ರಾಮದಲ್ಲಿ ಒಂದು ‘ಏಫೋದು’, ದೇವತಾಪ್ರತಿಮೆಗಳು, ಕೆತ್ತನೆಯ ಮತ್ತು ಎರಕದ ವಿಗ್ರಹಗಳು ಇರುತ್ತವೆ ಎಂಬುದು ನಿಮಗೆ ಗೊತ್ತುಂಟೇ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಲಯಿಷಿನ ದೇಶವನ್ನು ಸಂಚರಿಸಿ ನೋಡಿ ಬಂದ ಆ ಐದು ಮಂದಿ ಜನರು ತಮ್ಮ ಸಹೋದರರಿಗೆ ಉತ್ತರಕೊಟ್ಟು, “ಈ ಮನೆಗಳಲ್ಲಿ ಏಫೋದೂ, ಪ್ರತಿಮೆಗಳೂ, ಕೆತ್ತಿದ ವಿಗ್ರಹವೂ, ಎರಕದ ವಿಗ್ರಹವೂ ಉಂಟೆಂದು ನಿಮಗೆ ಗೊತ್ತುಂಟೋ? ನೀವು ಈಗ ಮಾಡಬೇಕಾದದ್ದೇನೆಂದು ತಿಳಿದುಕೊಳ್ಳಿರಿ,” ಎಂದರು.