Judges 18:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ದಾನ್ಯರು ಆ ನಗರಕ್ಕೆ ಒಂದು ಹೊಸ ಹೆಸರನ್ನು ಕೊಟ್ಟರು. ಹಿಂದೆ ಅದರ ಹೆಸರು ಲಯಿಷ್ ಎಂದಿತ್ತು. ಆದರೆ ಅವರು ಅದಕ್ಕೆ ದಾನ್ ಎಂದು ಹೆಸರಿಟ್ಟರು. ಅವರು ತಮ್ಮ ಪೂರ್ವಿಕನಾದ ದಾನನ ಸ್ಮರಣಾರ್ಥವಾಗಿ ಆ ಹೆಸರನ್ನಿಟ್ಟರು. ದಾನನು ಇಸ್ರೇಲನ ಮಕ್ಕಳಲ್ಲಿ ಒಬ್ಬನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೊದಲು ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ದಾನ್ ಎಂದು ಹೆಸರಿಟ್ಟರು. ದಾನ್ ಎಂಬುದು ಇವರ ಮೂಲಪುರುಷನೂ ಇಸ್ರಾಯೇಲನ ಮಗನೂ ಆದ ದಾನನ ಹೆಸರು.
Kannada BSI Bible 2016
ಅಲ್ಲಿ ಅವರು ಪಟ್ಟಣವನ್ನು ಕಟ್ಟಿ ಅದರಲ್ಲಿ ವಾಸವಾಗಿದ್ದರು. ಆದರೆ ಪಟ್ಟಣಕ್ಕೆ ಇಸ್ರಾಯೇಲಿಗೆ ಹುಟ್ಟಿದ ತಮ್ಮ ತಂದೆಯಾದ ದಾನನ ಹೆಸರಿನ ಹಾಗೆಯೇ ದಾನನು ಎಂದು ಹೆಸರಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮುಂಚೆ ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ದಾನ್ ಎಂದು ಹೆಸರಿಟ್ಟರು. ದಾನ್ ಎಂಬದು ಇವರ ಮೂಲಪುರುಷನೂ ಇಸ್ರಾಯೇಲನ ಮಗನೂ ಆದವನ ಹೆಸರು.
Kannada Bible (KNCL) BSI 2016
ಮುಂಚೆ ಲಯಿಷ್ ಎಂಬ ಹೆಸರಿದ್ದ ಆ ಪಟ್ಟಣಕ್ಕೆ ಈಗ ‘ದಾನ್’ ಎಂದು ಹೆಸರಿಟ್ಟರು. ದಾನ್ ಎಂಬುದು ಇವರ ಮೂಲ ಪುರುಷನೂ ಇಸ್ರಯೇಲನ ಮಗನೂ ಆದವನ ಹೆಸರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೊದಲು ಆ ಪಟ್ಟಣಕ್ಕೆ ಲಯಿಷೆಂಬ ಹೆಸರಿತ್ತು. ಈಗ ದಾನ್ಯರು ಆ ಪಟ್ಟಣಕ್ಕೆ ಇಸ್ರಾಯೇಲನಿಗೆ ಹುಟ್ಟಿದ ತಮ್ಮ ಮೂಲಪುರುಷನಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.