Judges 19:17 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ವೃದ್ಧನು ಬೀದಿಯ ಮುಖ್ಯಸ್ಥಳದಲ್ಲಿ ಪ್ರಯಾಣಿಕನನ್ನು (ಲೇವಿಯನ್ನು) ನೋಡಿದನು. ಆ ವೃದ್ಧನು, “ನೀನು ಎಲ್ಲಿಗೆ ಹೋಗಬೇಕು? ಎಲ್ಲಿಂದ ಬಂದಿರುವೆ?” ಎಂದು ಅವನನ್ನು ಕೇಳಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು
Kannada BSI Bible 2016
ಆ ಮುದುಕನು ತನ್ನ ಕಣ್ಣುಗಳನ್ನೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿ ತಿದ್ದ ಮಾರ್ಗದವನನ್ನು ನೋಡಿ--ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಈ ಮುದುಕನು ಬೀದಿಯಲ್ಲಿ ಕೂತಿದ್ದ ಆ ದಾರಿಗನನ್ನು ಕಂಡು - ಎಲ್ಲಿಂದ ಬಂದಿ? ಎಲ್ಲಿಗೆ ಹೋಗುತ್ತೀ ಎಂದು ಕೇಳಲು
Kannada Bible (KNCL) BSI 2016
ಈ ಮುದುಕ, ಬೀದಿಯಲ್ಲಿ ಕುಳಿತಿದ್ದ ಆ ದಾರಿಗನನ್ನು ಕಂಡು, “ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಮುದುಕನು ತನ್ನ ಕಣ್ಣೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿತಿದ್ದ ಯಾತ್ರಿಕನನ್ನು ಕಂಡು, “ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ?” ಎಂದನು.