Judges 19:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆ ಲೇವಿಯನು ಮರುದಿನ ಬೆಳಿಗ್ಗೆ ಬೇಗ ಎದ್ದನು. ಅವನು ತನ್ನ ಮನೆಗೆ ಹೋಗಬೇಕೆಂದಿದ್ದನು. ಆದ್ದರಿಂದ ಹೊರಗೆ ಹೋಗಲು ಬಾಗಿಲು ತೆರೆದನು. ಬಾಗಿಲ ಮುಂದೆ ಹೊಸ್ತಿಲದ ಮೇಲೆ ಕೈಚಾಚಿ ಬಿದ್ದಿದ್ದ ತನ್ನ ಉಪಪತ್ನಿಯನ್ನು ಕಂಡನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆಯಲು, ತನ್ನ ಉಪಪತ್ನಿಯು ಬಾಗಿಲ ಮುಂದೆ ಬಿದ್ದಿರುವುದನ್ನೂ, ಆಕೆಯ ಕೈಗಳು ಹೊಸ್ತಿಲಿನ ಮೇಲಿರುವುದನ್ನೂ ಕಂಡನು.
Kannada BSI Bible 2016
ಅವಳ ಯಜ ಮಾನನು ಉದಯದಲ್ಲಿ ಎದ್ದು ಮನೆಯ ಬಾಗಲನ್ನು ತೆರೆದು ತನ್ನ ಮಾರ್ಗವಾಗಿ ಹೊರಡುವಾಗ ಇಗೋ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯ ಪತಿಯು ಬೆಳಿಗ್ಗೆ ಎದ್ದು ಹೊರಡುವದಕ್ಕೆ ಸಿದ್ಧನಾಗಿ ಬಾಗಲನ್ನು ತೆರೆಯಲು ತನ್ನ ಉಪಪತ್ನಿಯು ಬಾಗಲ ಮುಂದೆ ಬಿದ್ದಿರುವದನ್ನೂ ಆಕೆಯ ಕೈಗಳು ಹೊಸ್ತಲಿನ ಮೇಲಿರುವದನ್ನೂ ಕಂಡನು.
Kannada Bible (KNCL) BSI 2016
ಆಕೆಯ ಪತಿ ಬೆಳಿಗ್ಗೆ ಎದ್ದು ಹೊರಡುವುದಕ್ಕೆ ಸಿದ್ಧನಾಗಿ ಬಾಗಿಲನ್ನು ತೆರೆದಾಗ ತನ್ನ ಉಪಪತ್ನಿ ಬಾಗಿಲ ಮುಂದೆ ಬಿದ್ದಿರುವುದನ್ನೂ ಆಕೆಯ ಕೈಗಳು ಹೊಸ್ತಲಿನ ಮೇಲಿರುವುದನ್ನೂ ಕಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವಳ ಯಜಮಾನನು ಉದಯದಲ್ಲಿ ಎದ್ದು, ಮನೆಯ ಬಾಗಿಲನ್ನು ತೆರೆದು, ತನ್ನ ಮಾರ್ಗವಾಗಿ ಹೊರಡುವಾಗ, ತನ್ನ ಉಪಪತ್ನಿ ಮನೆಯ ಬಾಗಿಲ ಮುಂದೆ ತನ್ನ ಕೈಗಳನ್ನು ಹೊಸ್ತಿಲ ಮೇಲೆ ಇಟ್ಟವಳಾಗಿ ಬಿದ್ದಿದ್ದಳು.