Judges 19:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ಮನೆಗೆ ಬಂದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹನ್ನೆರಡು ಹೋಳಾಗಿ ಕತ್ತರಿಸಿದನು. ಆಮೇಲೆ ಅವನು ಆ ಸ್ತ್ರೀಯ ದೇಹದ ಹನ್ನೆರಡು ಹೋಳುಗಳನ್ನು ಇಸ್ರೇಲರು ವಾಸಮಾಡುವ ಎಲ್ಲ ಪ್ರದೇಶಗಳಿಗೆ ಕಳುಹಿಸಿಕೊಟ್ಟನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ತನ್ನ ಮನೆಗೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು, ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ, ಅವುಗಳನ್ನು ಇಸ್ರಾಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು.
Kannada BSI Bible 2016
ಅವನು ತನ್ನ ಮನೆಗೆ ಹೋದಾಗ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡು ಗಳಾಗಿ ಕಡಿದು ಅವುಗಳನ್ನು ಇಸ್ರಾಯೇಲಿನ ಮೇರೆ ಗಳಿಗೆಲ್ಲಾ ಕಳುಹಿಸಿದನು.ಆಗ ಅದನ್ನು ನೋಡುವ ವರೆಲ್ಲಾ--ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ಬಂದ ದಿವಸ ಮೊದಲುಗೊಂಡು ಈ ಪರ್ಯಂತರ ಇಂಥಾ ಕಾರ್ಯವು ಆದದ್ದೂ ಇಲ್ಲ, ಕಾಣಲ್ಪಟ್ಟದ್ದೂ ಇಲ್ಲ. ಈ ಸಂಗತಿಯನ್ನು ಮನಸ್ಸಿಗೆ ತಂದು ವಿಚಾರಿಸತಕ್ಕದ್ದು ಅಂದುಕೊಂಡರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಮನೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ ಅವುಗಳನ್ನು ಇಸ್ರಾಯೇಲ್ಯರ ಎಲ್ಲಾ ಪ್ರಾಂತಗಳಿಗೆ ಕಳುಹಿಸಿದನು.
Kannada Bible (KNCL) BSI 2016
ಅವನು ಮನೆ ಸೇರಿದ ಮೇಲೆ ಒಂದು ಕತ್ತಿಯನ್ನು ತೆಗೆದುಕೊಂಡು ತನ್ನ ಉಪಪತ್ನಿಯ ಶವವನ್ನು ಎಲುಬುಗಳ ಸಹಿತವಾಗಿ ಹನ್ನೆರಡು ತುಂಡುಮಾಡಿ ಅವುಗಳನ್ನು ಇಸ್ರಯೇಲರ ಎಲ್ಲಾ ಪ್ರಾಂತ್ಯಗಳಿಗೆ ಕಳುಹಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ತನ್ನ ಮನೆಗೆ ಹೋದಾಗ, ಒಂದು ಖಡ್ಗವನ್ನು ತೆಗೆದುಕೊಂಡು ತನ್ನ ಉಪಪತ್ನಿಯನ್ನು ಹಿಡಿದು ಎಲುಬುಗಳ ಸಂಗಡ ಹನ್ನೆರಡು ತುಂಡುಗಳಾಗಿ ಕಡಿದು, ಅವುಗಳನ್ನು ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿದನು.