Judges 19:6 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದ್ದರಿಂದ ಆ ಲೇವಿಯು ಮತ್ತು ಅವನ ಮಾವನು ಒಟ್ಟಿಗೆ ಅನ್ನಪಾನಗಳನ್ನು ತೆಗೆದುಕೊಂಡರು. ಬಳಿಕ ಆ ಸ್ತ್ರೀಯ ತಂದೆಯು, “ದಯವಿಟ್ಟು ಈ ರಾತ್ರಿ ಇದ್ದುಬಿಡು. ವಿಶ್ರಮಿಸಿಕೋ, ಸಂತೋಷಪಡು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವರಿಬ್ಬರೂ ಕುಳಿತುಕೊಂಡು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆಯು ಪುನಃ ಅವನಿಗೆ, “ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇದ್ದು ಸಂತೋಷಪಡು” ಎಂದು ಹೇಳಿದರೂ ಆ ಲೇವಿಯನು ಹೊರಡುವುದಕ್ಕಿದ್ದನು;
Kannada BSI Bible 2016
ಅವರಿಬ್ಬರು ಕುಳಿತು ಕೂಡಿ ತಿಂದು ಕುಡಿದರು. ಆ ಸ್ತ್ರೀಯ ತಂದೆ ಆ ಮನುಷ್ಯನಿಗೆ--ನೀನು ದಯಮಾಡಿ ನಿನ್ನ ಹೃದಯ ವನ್ನು ಸಂತೋಷಪಡಿಸುವದಕ್ಕೆ ಈ ರಾತ್ರಿ ಇರು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವರಿಬ್ಬರೂ ಕೂತು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆಯು ತಿರಿಗಿ ಅವನಿಗೆ - ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇದ್ದು ಸಂತೋಷಪಡು ಎಂದು ಹೇಳಿದರೂ ಅವನು ಹೊರಡುವದಕ್ಕಿದ್ದನು;
Kannada Bible (KNCL) BSI 2016
ಅವರಿಬ್ಬರೂ ಕುಳಿತು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆ ಪುನಃ ಅವನಿಗೆ, “ದಯವಿಟ್ಟು ಈ ರಾತ್ರಿ ಇಲ್ಲೇ ಇದ್ದು ಸಂತೋಷಪಡು,” ಎಂದು ಹೇಳಿದರೂ ಅವನು ಹೊರಡಲು ಸಿದ್ಧನಾದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದ್ದರಿಂದ ಅವರಿಬ್ಬರು ಊಟ ಮಾಡಲು, ಕುಡಿಯಲು ಕುಳಿತುಕೊಂಡರು. ಅನಂತರದಲ್ಲಿ ಆ ಸ್ತ್ರೀಯ ತಂದೆಯು, “ಈ ರಾತ್ರಿ ಇಲ್ಲೇ ಇದ್ದುಕೊಂಡು ಸಂತೋಷಪಡು,” ಎಂದು ಹೇಳಿದನು.