Judges 19:9 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆಮೇಲೆ ಆ ಲೇವಿಯೂ ಅವನ ಉಪಪತ್ನಿಯೂ ಅವನ ಆಳೂ ಹೊರಡಲು ಎದ್ದರು. ಆದರೆ ಆ ಸ್ತ್ರೀಯ ತಂದೆಯು, “ಈಗ ಕತ್ತಲಾಗುತ್ತಾ ಬಂತು, ಹೊತ್ತು ಮುಳುಗುವುದರಲ್ಲಿದೆ. ಈ ರಾತ್ರಿ ಇಲ್ಲಿಯೇ ಸಂತೋಷದಿಂದ ಕಾಲ ಕಳೆಯಿರಿ. ನಾಳೆ ಬೆಳಿಗ್ಗೆ ನೀವು ಬೇಗನೆ ಎದ್ದು ಪ್ರಯಾಣಮಾಡಬಹುದು” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.
Kannada BSI Bible 2016
ಅವನೂ ಅವನ ಉಪಪತ್ನಿಯೂ ಅವನ ಊಳಿಗದ ವನೂ ಹೋಗುವದಕ್ಕೆ ಎದ್ದಾಗ ಹೆಂಗಸಿನ ತಂದೆ ಯಾದ ಅವನ ಮಾವನು ಅವನಿಗೆ--ಇಗೋ, ಹೊತ್ತು ಹೋಗಿ ಸಂಜೆಯಾಯಿತು; ಈ ರಾತ್ರಿ ನೀನು ದಯ ಮಾಡಿ ಇಲ್ಲಿ ಇರು; ಹೊತ್ತು ಮುಣುಗುತ್ತಾ ಬಂತು; ನಿನ್ನ ಹೃದಯವನ್ನು ಸಂತೋಷಪಡಿಸುವ ಹಾಗೆ ಈ ರಾತ್ರಿ ಇಲ್ಲಿದ್ದು ನಿನ್ನ ಗುಡಾರಕ್ಕೆ ಹೋಗುವ ಹಾಗೆ ನಾಳೆ ಬೆಳಿಗ್ಗೆ ಎದ್ದು ನಿಮ್ಮ ಮಾರ್ಗ ಹಿಡಿದು ಹೋಗ ಬಹುದು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅನಂತರ ಅವನೂ ಅವನ ಉಪಪತ್ನಿಯೂ ಸೇವಕನೂ ಹೋಗುವದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ - ಹೊತ್ತು ಹೋಯಿತು; ಸಂಜೆಯಾಯಿತು. ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಸಾಯಂಕಾಲವಾಯಿತು. ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು ಎಂದು ಬೇಡಿಕೊಂಡರೂ
Kannada Bible (KNCL) BSI 2016
ಅನಂತರ ಅವನು, ಅವನ ಉಪಪತ್ನಿ ಹಾಗು ಸೇವಕನು ಹೋಗುವುದಕ್ಕ ಸಿದ್ಧರಾಗಲು ಆ ಸ್ತ್ರೀಯ ತಂದೆ ಅಳಿಯನಿಗೆ, “ಹೊತ್ತುಮೀರಿತು; ಸಂಜೆ ಆಯಿತು. ದಯವಿಟ್ಟು ಈ ದಿನ ರಾತ್ರಿ ಇಲ್ಲೇ ಇರು; ನೋಡು, ಸಂಜೆಯಾಗಿಹೋಯಿತು. ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು,” ಎಂದು ಬೇಡಿಕೊಂಡನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನೂ, ಅವನ ಉಪಪತ್ನಿಯೂ ಅವನ ಸೇವಕನೂ ಹೋಗುವುದಕ್ಕೆ ಎದ್ದಾಗ, ಅವನ ಮಾವನು ಅವನಿಗೆ, “ಇಗೋ, ಹೊತ್ತು ಹೋಗಿ ಸಂಜೆ ಆಯಿತು. ಈ ರಾತ್ರಿ ನೀನು ದಯಮಾಡಿ ಇಲ್ಲೇ ಇರು; ಹೊತ್ತು ಮುಣುಗುತ್ತಾ ಬಂತು. ನೀನು ಈ ರಾತ್ರಿ ಇಲ್ಲಿದ್ದು, ನಿನ್ನ ಗುಡಾರಕ್ಕೆ ನಾಳೆ ಬೆಳಿಗ್ಗೆ ಎದ್ದು, ನಿಮ್ಮ ಮಾರ್ಗ ಹಿಡಿದು ಹೋಗಬಹುದು,” ಎಂದನು.