Judges 20:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲಿನ ಜನರು ಬೇತೇಲಿಗೆ ಹೋದರು. ಬೇತೇಲಿನಲ್ಲಿ ಅವರು “ಯಾವ ಕುಲದವರು ಮೊದಲು ಬೆನ್ಯಾಮೀನ್ಯರ ಮೇಲೆ ಧಾಳಿಮಾಡಬೇಕು” ಎಂದು ಯೆಹೋವನನ್ನು ಕೇಳಿದರು. ಅದಕ್ಕೆ ಯೆಹೋವನು, “ಯೆಹೂದ ಕುಲದವರು ಮೊದಲು ಹೋಗಬೇಕು” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಇಸ್ರಾಯೇಲ್ಯರು ಬೇತೇಲಿಗೆ ಹೋಗಿ, “ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ದೇವರಾದ ಯೆಹೋವನನ್ನು ಕೇಳಲು ಆತನು, “ಮೊದಲು ಯೆಹೂದ ಕುಲದವರು ಹೋಗಲಿ” ಎಂದು ಹೇಳಿದನು.
Kannada BSI Bible 2016
ಆಗ ಇಸ್ರಾಯೇಲಿನ ಮಕ್ಕಳು ಎದ್ದು ದೇವರ ಮನೆಗೆ ಹೋಗಿ ತಮ್ಮಲ್ಲಿ ಮೊದಲು ಬೆನ್ಯಾವಿಾನನ ಮಕ್ಕಳ ಸಂಗಡ ಯುದ್ಧಮಾಡುವದಕ್ಕೆ ಹೋಗ ಬೇಕಾ ದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಕರ್ತನು -- ಯೊಹೂದ ಕುಲದವರು ಮೊದಲು ಹೋಗಬೇಕು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಇಸ್ರಾಯೇಲ್ಯರು ಬೇತೇಲಿಗೆ ಹೋಗಿ - ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಯೆಹೋವನನ್ನು ಕೇಳಲು ಆತನು - ಮೊದಲು ಯೆಹೂದಕುಲದವರು ಹೋಗಲಿ ಎಂದು ಹೇಳಿದನು.
Kannada Bible (KNCL) BSI 2016
ಇಸ್ರಯೇಲರು ಬೇತೇಲಿಗೆ ಹೋಗಿ, ಬೆನ್ಯಾಮೀನ್ಯರ ಮೇಲೆ ಯುದ್ಧಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು ಎಂದು ದೇವರಾದ ಸರ್ವೇಶ್ವರನನ್ನು ಕೇಳಲು ಅವರು, “ಮೊದಲು ಯೆಹೂದಕುಲದವರು ಹೋಗಲಿ,” ಎಂದು ಹೇಳಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಇಸ್ರಾಯೇಲರು ಬೇತೇಲಿಗೆ ಹೋಗಿ, ತಮ್ಮಲ್ಲಿ ಮೊದಲು ಬೆನ್ಯಾಮೀನ್ಯರ ಸಂಗಡ ಯುದ್ಧಮಾಡುವುದಕ್ಕೆ ಹೋಗಬೇಕಾದವರು ಯಾರೆಂದು ದೇವರನ್ನು ಕೇಳಿದರು. ಅದಕ್ಕೆ ಯೆಹೋವ ದೇವರು, “ಯೆಹೂದ ಗೋತ್ರದವರು ಮೊದಲು ಹೋಗಬೇಕು,” ಎಂದರು.