Judges 20:36 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಇಸ್ರೇಲರ ಸೈನಿಕರು ಹಿಮ್ಮೆಟ್ಟಿದ್ದರು. ಗಿಬೆಯದ ಹತ್ತಿರ ಅಡಗಿಕೊಂಡಿದ್ದ ತಮ್ಮ ಜನರು ಹಠಾತ್ ಧಾಳಿಮಾಡುವರೆಂದು ನಂಬಿ ಅವರು ಹಿಮ್ಮೆಟ್ಟಿದ್ದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚು ಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದರಿಂದ, ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
Kannada BSI Bible 2016
ಹೀಗೆ ಬೆನ್ಯಾವಿಾನನ ಮಕ್ಕಳು ತಾವು ಹೊಡೆಯಲ್ಪಟ್ಟಿದೇವೆಂದು ಕಂಡರು; ಯಾಕಂದರೆ ಇಸ್ರಾಯೇಲ್ ಮನುಷ್ಯರು ಗಿಬೆಯದ ಬಳಿಯಲ್ಲಿ ಹೊಂಚು ಹಾಕುವದಕ್ಕೆ ಇಟ್ಟವರನ್ನು ನಂಬಿದ್ದದರಿಂದ ಬೆನ್ಯಾವಿಾನ್ಯರಿಗೆ ಸ್ಥಳವನ್ನು ಕೊಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಾವು ಸೋತು ಹೋದೆವೆಂಬದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. (ಇಸ್ರಾಯೇಲ್ಯರು ತಾವು ಗಿಬೆಯದ ಸಮೀಪದಲ್ಲಿ ಹೊಂಚಿನೋಡುವದಕ್ಕೋಸ್ಕರ ಇಟ್ಟ ಜನರಲ್ಲಿ ಭರವಸವುಳ್ಳವರಾಗಿದ್ದದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
Kannada Bible (KNCL) BSI 2016
ತಾವು ಸೋತುಹೋದೆವೆಂಬುದು ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. (ಇಸ್ರಯೇಲರಿಗೆ ತಾವು ಗಿಬೆಯದ ಸಮೀಪದಲ್ಲಿ ಹೊಂಚುಹಾಕುವುದಕ್ಕಾಗಿ ಇಟ್ಟ ಜನರಲ್ಲಿ ಭರವಸೆಯಿತ್ತು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಾವು ಸೋತುಹೋದೆವೆಂಬುದು ಹೀಗೆ ಬೆನ್ಯಾಮೀನ್ಯರಿಗೆ ಆಗ ತಿಳಿಯಿತು. ಏಕೆಂದರೆ ಇಸ್ರಾಯೇಲರು ಗಿಬೆಯದ ಹತ್ತಿರ ಹೊಂಚು ಹಾಕುವದಕ್ಕೆ ಇಟ್ಟ ಜನರನ್ನು ನಂಬಿದ್ದರು. ಆದುದರಿಂದ ತಮ್ಮ ಸ್ಥಳವನ್ನು ಬಿಟ್ಟು ಬೆನ್ಯಾಮೀನ್ಯರ ಮುಂದೆ ಓಡಿಹೋದರು.