Judges 21:18 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆದರೆ ನಾವೂ ನಮ್ಮ ಹೆಣ್ಣುಮಕ್ಕಳೂ ಬೆನ್ಯಾಮೀನ್ಯರೊಂದಿಗೆ ಮದುವೆಯಾಗಲು ಒಪ್ಪುವಂತಿಲ್ಲ. ಏಕೆಂದರೆ ‘ಬೆನ್ಯಾಮೀನ್ಯರಿಗೆ ಯಾರಾದರೂ ಹೆಣ್ಣನ್ನು ಕೊಟ್ಟರೆ ಅವರು ಶಾಪಗ್ರಸ್ತರಾಗುತ್ತಾರೆ’ ಎಂದು ನಾವೇ ಆಣೆ ಇಟ್ಟಿದ್ದೇವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಾಯೇಲರು ಶಾಪಗ್ರಸ್ತರಾಗಲಿ ಎಂದು ಆಣೆಯಿಟ್ಟುಕೊಂಡಿದ್ದ ಕಾರಣ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ” ಎಂದು ಮಾತನಾಡಿಕೊಳ್ಳುತ್ತಿದ್ದರು.
Kannada BSI Bible 2016
ನಾವಾದರೋ ನಮ್ಮ ಕುಮಾರ್ತೆಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು. ಯಾಕಂದರೆ, ಬೆನ್ಯಾವಿಾನ್ಯರಿಗೆ ಹೆಣ್ಣು ಕೊಡುವವನು ಶಪಿಸಲ್ಪಡಲೆಂದು ಇಸ್ರಾಯೇ ಲಿನ ಮಕ್ಕಳು ಆಣೆ ಇಟ್ಟುಕೊಂಡಿದ್ದಾರೆ ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ ಎಂದು ಆಣೆಯಿಟ್ಟುಕೊಂಡಿದ್ದೇವಾದದರಿಂದ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವದಕ್ಕಾಗುವದಿಲ್ಲ ಎಂದು ಮಾತಾಡಿಕೊಳ್ಳುತ್ತಿರುವಾಗ
Kannada Bible (KNCL) BSI 2016
ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣುಗಳನ್ನು ಕೊಡುವ ಇಸ್ರಯೇಲರು ಶಾಪಗ್ರಸ್ತರಾಗಲಿ! ಎಂದು ಆಣೆಯಿಟ್ಟುಕೊಂಡಿದ್ದೇವೆ. ಇದರಿಂದ ನಾವು ಅವರಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಕ್ಕಾಗುವುದಿಲ್ಲ,”
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
‘ಬೆನ್ಯಾಮೀನ್ಯರಿಗೆ ತಮ್ಮ ಹೆಣ್ಣು ಕೊಡುವ ಇಸ್ರಾಯೇಲ್ಯರು ಶಾಪಗ್ರಸ್ತರಾಗಲಿ,’ ಎಂದು ಆಣೆ ಇಟ್ಟುಕೊಂಡಿದ್ದರಿಂದ, ನಾವಾದರೋ ನಮ್ಮ ಪುತ್ರಿಯರಲ್ಲಿ ಅವರಿಗೆ ಹೆಣ್ಣು ಕೊಡಕೂಡದು,” ಎಂದರು.