Judges 3:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಏಹೂದನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂತಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸಬೇಕಾದ ಒಂದು ರಹಸ್ಯ ಸಂದೇಶವಿದೆ” ಎಂದು ಹೇಳಿದನು. ಅರಸನು, “ಸುಮ್ಮನಿರು” ಎಂದು ಹೇಳಿ ತನ್ನ ಸೇವಕರೆಲ್ಲರನ್ನು ಕೋಣೆಯಿಂದ ಆಚೆ ಕಳುಹಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು, “ಅರಸನೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವಿದೆ” ಅಂದನು. ಆಗ ಅರಸನು, “ನಿಶ್ಯಬ್ದ” ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು.
Kannada BSI Bible 2016
ತಾನು ಗಿಲ್ಗಾಲಿನಲ್ಲಿರುವ ಕಲ್ಲುಗುಣಿಯ ಸ್ಥಳದಿಂದ ಹಿಂದಕ್ಕೆ ತಿರುಗಿ ಅವನ ಬಳಿಗೆ ಬಂದು--ಓ ಅರಸೇ, ನಿನಗೆ ಹೇಳತಕ್ಕ ರಹಸ್ಯವಾದ ಒಂದು ಮಾತು ಅದೆ ಅಂದನು. ಅವನು--ಸುಮ್ಮನಿರ್ರಿ ಎಂದು ಹೇಳಿದಾಗ ಅವನ ಬಳಿಯಲ್ಲಿ ನಿಂತವರೆಲ್ಲರು ಅವನನ್ನು ಬಿಟ್ಟು ಹೊರಗೆಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಿರುಗಿ ಎಗ್ಲೋನನ ಬಳಿಗೆ ಬಂದು - ಅರಸೇ, ನಿನಗೆ ತಿಳಿಸತಕ್ಕದ್ದೊಂದು ರಹಸ್ಯವದೆ ಅಂದನು. ಆಗ ಅರಸನು ನಿಶ್ಶಬ್ದ ಅನ್ನಲು ಅವನ ಸೇವಕರೆಲ್ಲರೂ ಹೊರಗೆ ಹೋದರು.
Kannada Bible (KNCL) BSI 2016
ತಾನಾದರೋ ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದವರೆಗೆ ಹೋಗಿ, ಹಿಂದಿರುಗಿ ಎಗ್ಲೋನನ ಬಳಿಗೆ ಬಂದನು; “ಅರಸರೇ, ತಮಗೆ ತಿಳಿಸಬೇಕಾದ ಒಂದು ರಹಸ್ಯ ವಿಷಯವಿದೆ,” ಎಂದನು. ಆಗ ಅರಸ, “ನಿಶ್ಯಬ್ದ” ಎಂದನು. ಅವನ ಸೇವಕರೆಲ್ಲರು ಅಲ್ಲಿಂದ ಹೊರಗೆ ಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತಾನು ಗಿಲ್ಗಾಲಿನಲ್ಲಿರುವ ವಿಗ್ರಹಸ್ಥಳದಿಂದ ಹಿಂದಕ್ಕೆ ತಿರುಗಿ, ಅವನ ಬಳಿಗೆ ಬಂದು, “ಅರಸನೇ, ನಿನ್ನ ಸಂಗಡ ಹೇಳಬೇಕಾದ ರಹಸ್ಯವಾದ ಒಂದು ಮಾತು ಇದೆ,” ಎಂದನು. ಅವನು, “ನಿಶ್ಶಬ್ದ,” ಎಂದು ಹೇಳಿದಾಗ, ಅವನ ಬಳಿಯಲ್ಲಿ ನಿಂತಿದ್ದವರೆಲ್ಲರು ಅವನನ್ನು ಬಿಟ್ಟು ಹೊರಗೆ ಹೋದರು.