Judges 3:24 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಏಹೂದನು ಹೋದ ಕೂಡಲೆ ಸೇವಕರು ಹಿಂದಿರುಗಿ ಬಂದರು. ಕೋಣೆಯ ಬಾಗಿಲಿಗೆ ಬೀಗ ಹಾಕಿದ್ದನ್ನು ಸೇವಕರು ನೋಡಿದರು. “ಅರಸನು ತನ್ನ ವಿಶ್ರಾಂತಿ ಕೋಣೆಯ ಶೌಚಾಲಯದಲ್ಲಿ ಇರಬಹುದು” ಎಂದುಕೊಂಡರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತರುವಾಯ ಸೇವಕರು ಅಲ್ಲಿ ಬಂದು ಬಾಗಿಲಿಗೆ ಬೀಗಹಾಕಿರುವುದನ್ನು ಕಂಡು, ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು
Kannada BSI Bible 2016
ಅವನು ಹೋದ ತರುವಾಯ ಸೇವಕರು ಕೊಠಡಿಯ ಬಾಗಲು ಮುಚ್ಚಲ್ಪ ಟ್ಟಿರುವದನ್ನು ಕಂಡಾಗ--ಅರಸನು ನಿಶ್ಚಯವಾಗಿ ತನ್ನ ಬೇಸಿಗೆಯ ಕೊಠಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳು ತ್ತಿದ್ದಾನೆಂದು ಅಂದುಕೊಂಡು
Kannada BSI JV (ಕನ್ನಡ ಸತ್ಯವೇದವು J.V. (BSI))
ತರುವಾಯ ಸೇವಕರು ಅಲ್ಲಿ ಬಂದು ಬಾಗಲಿಗೆ ಬೀಗಹಾಕಿರುವದನ್ನು ಕಂಡು - ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು
Kannada Bible (KNCL) BSI 2016
ತರುವಾಯ ಸೇವಕರು ಅಲ್ಲಿಗೆ ಬಂದು ಬಾಗಿಲಿಗೆ ಅಗುಳಿ ಹಾಕಿರುವುದನ್ನು ಕಂಡು, “ಅರಸ ತಂಪಾದ ಕೊಠಡಿಗೆ ಸೇರಿದ ಪಾಯಖಾನೆಗೆ ಹೋಗಿರಬೇಕೆಂದು,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ಹೋದ ತರುವಾಯ, ಕೊಠಡಿಯ ಸೇವಕರು ಬಾಗಿಲು ಮುಚ್ಚಿರುವುದನ್ನು ಕಂಡು, “ಅರಸನು ನಿಶ್ಚಯವಾಗಿ ತನ್ನ ತಂಪಾದ ಕೋಣೆಯಲ್ಲಿ ವಿಸರ್ಜನೆಗಾಗಿ ಹೋಗಿರಬೇಕು,” ಎಂದುಕೊಂಡರು.