Judges 4:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬಾರಾಕ ಮತ್ತು ಅವನ ಜನರು ಸೀಸೆರನ ಸೈನ್ಯವನ್ನು ಮತ್ತು ರಥಗಳನ್ನು ಹರೋಷೆತ್ ಹಗ್ಗೋಯಿಮ್‌ನವರೆಗೆ ಬೆನ್ನಟ್ಟಿದರು. ಬಾರಾಕ ಮತ್ತು ಅವನ ಜನರು ಖಡ್ಗದಿಂದ ಸೀಸೆರನ ಜನರನ್ನು ಕೊಂದುಹಾಕಿದರು. ಸೀಸೆರನ ಜನರಲ್ಲಿ ಒಬ್ಬನನ್ನೂ ಜೀವಂತವಾಗಿ ಬಿಡಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಬಾರಾಕನು ಅವನ ಸೈನ್ಯರಥಗಳನ್ನು ಅನ್ಯಜನರ ಹರೋಷೆತಿನ ವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರೂ ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
Kannada BSI Bible 2016
ಆಗ ಸೀಸೆರನು ರಥವನ್ನು ಬಿಟ್ಟು ಇಳಿದು ಕಾಲು ನಡೆಯಾಗಿ ಓಡಿ ಹೋದನು. ಆದರೆ ಬಾರಾಕನು ರಥಗಳನ್ನೂ ಸೈನ್ಯ ವನ್ನೂ ಅನ್ಯಜನಾಂಗಗಳ ಹರೋಷೆತಿನ ಮಟ್ಟಿಗೂ ಹಿಂದಟ್ಟಿದನು. ಸೀಸೆರನ ಸೈನ್ಯವೆಲ್ಲಾ ಕತ್ತಿಯಿಂದ ಹತ ವಾಗಿ ಬಿತ್ತು; ಒಬ್ಬನಾದರೂ ಉಳಿಯಲಿಲ್ಲ.
Kannada BSI JV (ಕನ್ನಡ ಸತ್ಯವೇದವು J.V. (BSI))
ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಫರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲಾ ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
Kannada Bible (KNCL) BSI 2016
ಬಾರಾಕನು ಅವನ ಸೈನ್ಯರಥಗಳನ್ನು ಮ್ಲೇಚ್ಛರ ಹರೋಷೆತಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಕತ್ತಿಯಿಂದ ಹತರಾದರು; ಒಬ್ಬನೂ ಉಳಿಯಲಿಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಬಾರಾಕನು ಅವನ ಸೈನ್ಯ, ರಥಗಳನ್ನು ಹರೋಷೆತ್ ಹಗ್ಗೋಯಿಮಿನವರೆಗೂ ಹಿಂದಟ್ಟಿದನು. ಸೀಸೆರನ ಸೈನ್ಯದವರೆಲ್ಲರು ಖಡ್ಗದಿಂದ ಹತರಾದರು, ಒಬ್ಬನೂ ಉಳಿಯಲಿಲ್ಲ.