Judges 5:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಾಳ ಝಲ್ಲರಿಗಳ ಧ್ವನಿಯನ್ನು ಕೇಳಿರಿ; ಬಾವಿಗಳ ಹತ್ತಿರ ನೆರೆದ ಜನಸಮೂಹದ ಧ್ವನಿಯನ್ನು ಕೇಳಿರಿ; ಅಲ್ಲಿ ಅವು ಯೆಹೋವನ ವಿಜಯದ ಬಗ್ಗೆ ಹೇಳುತ್ತವೆ. ಯೆಹೋವನ ಜನರು ಪಟ್ಟಣ ದ್ವಾರದಲ್ಲಿ ಯುದ್ಧಕ್ಕೆ ಹೋದಾಗ ಇಸ್ರೇಲಿನಲ್ಲಿ ಅವರ ವಿಜಯದ ಬಗ್ಗೆ ಹೇಳುತ್ತವೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಸೇದುವ ಬಾವಿಗಳ ಬಳಿಯಲ್ಲಿ ಬಿಲ್ಲುಗಾರರ ಧ್ವನಿಗಿಂತ ಗಟ್ಟಿಯಾಗಿ ಯೆಹೋವನ ನೀತಿಸಾಧನೆಯ ವರ್ಣನೆಯನ್ನು ಕೇಳಿರಿ. ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. ಆ ಕಾಲದಲ್ಲಿ ಯೆಹೋವನ ಜನರು ಊರುಬಾಗಿಲುಗಳಿಗೆ ಇಳಿದು ಬಂದರು.
Kannada BSI Bible 2016
ನೀರು ಸೇದುವ ಸ್ಥಳಗಳ ಹತ್ತಿರ ಬಿಲ್ಲುಗಾರರ ಶಬ್ದದಿಂದ ತಪ್ಪಿಸಲ್ಪಟ್ಟವರು ಅಲ್ಲಿ ಕರ್ತನ ನೀತಿಯುಳ್ಳ ಕ್ರಿಯೆಗಳನ್ನು ಇಸ್ರಾಯೇಲಿನಲ್ಲಿ ಆತನ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ನೀತಿಯುಳ್ಳ ಕ್ರಿಯೆಗಳನ್ನು ತಿರುತಿರುಗಿ ಪ್ರಕಟಿಸುವರು; ಕರ್ತನ ಜನರು ಬಾಗಲು ಗಳಿಗೆ ಇಳಿದು ಬರುವರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೇದುವ ಬಾವಿಗಳ ಬಳಿಯಲ್ಲಿ ಕೊಳ್ಳೆಯನ್ನು ಹಂಚಿಕೊಳ್ಳುವವರ ಧ್ವನಿಗಿಂತ ಗಟ್ಟಿಯಾಗಿ ಯೆಹೋವನ ನೀತಿಸಾಧನೆಯನ್ನು ವರ್ಣಿಸುತ್ತಾರೆ. ಆತನು ತನ್ನ ಪ್ರಜೆಗಳಾಗಿರುವ ಇಸ್ರಾಯೇಲ್ ಗ್ರಾಮಸ್ಥರ ನ್ಯಾಯವನ್ನು ಸ್ಥಾಪಿಸಿದ್ದಾನಲ್ಲಾ. ಆ ಕಾಲದಲ್ಲಿ ಯೆಹೋವನ ಜನರು ಊರು ಬಾಗಲುಗಳಿಗೆ ಇಳಿದು ಬಂದರು.
Kannada Bible (KNCL) BSI 2016
ಸೇದುವ ಬಾವಿಗಳ ಬಳಿ ಕುಳಿತು ಕೊಳ್ಳೆಹಂಚಿಕೊಳ್ಳುವವರ ಧ್ವನಿಯನಾಲಿಸು! ವರ್ಣಿಸುತಿಹರವರು ಸರ್ವೇಶ್ವರ ಸಾಧಿಸಿದ ನೀತಿಯನು, ತನ್ನ ಪ್ರಜೆ ಇಸ್ರಯೇಲ್ ಊರುಗಳಲ್ಲಾತನು ಸ್ಥಾಪಿಸಿದ ನ್ಯಾಯವನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀರು ಸೇದುವ ಸ್ಥಳಗಳ ಹತ್ತಿರ ಗಾಯಕರ ಶಬ್ದದಿಂದ ಯೆಹೋವ ದೇವರ ನೀತಿಸಾಧನೆಗಳನ್ನು ವರ್ಣಿಸುತ್ತಾರೆ. ಇಸ್ರಾಯೇಲಿನಲ್ಲಿ ಅವರ ಹಳ್ಳಿಗಳ ನಿವಾಸಿಗಳಿಗೆ ಮಾಡಿದ ಮಹತ್ಕಾರ್ಯಗಳನ್ನು ತಿರುಗಿ ಪ್ರಕಟಿಸುವರು. “ಆಗ ಯೆಹೋವ ದೇವರ ಜನರು ಪಟ್ಟಣದ ಬಾಗಿಲುಗಳಿಗೆ ಇಳಿದು ಬರುವರು.