Judges 5:15 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಇಸ್ಸಾಕಾರ್ ಕುಲದ ನಾಯಕರು ದೆಬೋರಳ ಜೊತೆಯಲ್ಲಿದ್ದರು. ಇಸ್ಸಾಕಾರ್ ಕುಲದವರು ಬಾರಾಕನಿಗೆ ನಂಬಿಗಸ್ತರಾಗಿದ್ದರು. ಅವರು ಕಾಲು ನಡಿಗೆಯಿಂದ ಕಣಿವೆಗೆ ಬಂದರು. “ರೂಬೇನ್ಯರೇ, ನಿಮ್ಮ ಸೈನ್ಯದಲ್ಲಿ ತುಂಬ ಶೂರರಿದ್ದಾರೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲಪ್ರಭುಗಳೂ ಇಸ್ಸಾಕಾರರೊಡನೆ ಬಾರಾಕನೂ ಆಗಮಿಸಿದರು. ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ತಟ್ಟನೆ ತಗ್ಗಿನ ಪ್ರದೇಶಕ್ಕೆ ಬಂದರು. ರೂಬೇನ್ಯರ ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ
Kannada BSI Bible 2016
ಇಸ್ಸಾಕಾರನ ಪ್ರಧಾನರು ದೆಬೋ ರಳ ಸಂಗಡ ಇದ್ದರು; ಇಸ್ಸಾಕಾರನು, ಬಾರಾಕನು ಹಾಗೆಯೇ; ಕಾಲು ನಡೆಯಾಗಿ ತಗ್ಗಿನಲ್ಲಿ ಕಳುಹಿಸ ಲ್ಪಟ್ಟನು. ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಆಲೋಚನೆಗಳು ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ದೆಬೋರಳ ಜೊತೆಯಲ್ಲಿ ಇಸ್ಸಾಕಾರ್ ಕುಲ ಪ್ರಭುಗಳೂ ಇಸ್ಸಾಕಾರ್ಯರೊಡನೆ ಬಾರಾಕನೂ ಆಗವಿುಸಿದರು. ಇವರೆಲ್ಲರೂ ಬಾರಾಕನ ಹೆಜ್ಜೆಹಿಡಿದು ಸರ್ರನೆ ತಗ್ಗಿಗೆ ಬಂದರು. ರೂಬೇನ್ಯರು ನೀರಿನ ಕಾಲುವೆಗಳ ಬಳಿಯಲ್ಲಿ ಮಾಡಿದ ತೀರ್ಮಾನಗಳು ಘನವಾದವುಗಳೇ ಸರಿ.
Kannada Bible (KNCL) BSI 2016
ಇಸ್ಸಾಕಾರ್ ಕುಲಪ್ರಭುಗಳು ಬಂದರು ದೆಬೋರಳ ಜೊತೆಯಲ್ಲಿ, ಆಗಮಿಸಿದನು ಬಾರಾಕನು ಇಸ್ಸಾಕಾರ್ಯರ ಸಂಗಡದಲಿ, ಇವನ ಹೆಜ್ಜೆಹಿಡಿದು ಬಂದರು ಅವರೆಲ್ಲರು ತವಕದಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇಸ್ಸಾಕಾರನ ಪ್ರಧಾನರು ದೆಬೋರಳ ಸಂಗಡ ಇದ್ದರು. ಹೌದು, ಇಸ್ಸಾಕಾರನ ಗೋತ್ರದವರು ಬಾರಾಕನ ಹಿಂದೆ ಅವನ ಕಟ್ಟಳೆಯ ಪ್ರಕಾರ, ಕಾಲುನಡಿಗೆಯಾಗಿ ಕಣಿವೆಯಲ್ಲಿ ನಡೆದರು. ರೂಬೇನನ ಕಡೆಯವರು ತಮ್ಮ ಹೃದಯಗಳನ್ನು ಮಹಾ ಪರಿಶೋಧನೆ ಮಾಡಿಕೊಂಡರು.