Judges 5:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಹೀಗಿರಲು ನೀನು ಕುರಿಯ ಹಟ್ಟಿಗಳ ಗೋಡೆಗೆ ಒರಗಿಕೊಂಡು ಕುಳಿತಿರುವುದೇಕೆ? ರೂಬೇನ್ಯರ ಶೂರ ಸೈನಿಕರು ಯುದ್ಧದ ಬಗ್ಗೆ ಬಹಳವಾಗಿ ಯೋಚಿಸಿದರು, ಆದರೆ ಕುರಿಗಳಿಗಾಗಿ ಬಾರಿಸುವ ಸಂಗೀತವನ್ನು ಕೇಳುತ್ತಾ ಮನೆಯಲ್ಲಿ ಇದ್ದುಬಿಟ್ಟರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ, ಮಂದೆಗಳ ಮಧ್ಯದಲ್ಲಿ ಕೊಳಲೂದುವುದನ್ನು ಕೇಳಬೇಕೆಂದು ಅಲ್ಲಿಯೇ ಕುಳಿತಿರುವುದೇಕೆ? ರೂಬೇನ್ಯರು ಗೋತ್ರದವರು ಬಹಳಷ್ಟು ತಮ್ಮ ಹೃದಯಗಳಲ್ಲಿ ವಿಶ್ಲೇಷಿಸಿದರೂ ತೀರ್ಮಾನಿಸಲಾಗಲ್ಲಿಲ್ಲ.
Kannada BSI Bible 2016
ಮಂದೆಗಳ ಕೂಗನ್ನು ಕೇಳಿ ನೀನು ದೊಡ್ಡಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನನ ಭಾಗಗಳಲ್ಲಿ ಹೃದಯದ ದೊಡ್ಡ ಪರಿಶೋ ಧನೆಗಳು ಇದ್ದವು.
Kannada BSI JV (ಕನ್ನಡ ಸತ್ಯವೇದವು J.V. (BSI))
ರೂಬೇನ್ಯರೇ, ನೀವು ಕುರಿಹಟ್ಟಿಗಳಲ್ಲಿ ಕೂತಿರುವದೇಕೆ? ಮಂದೆಗಳ ಮಧ್ಯದಲ್ಲಿ ಕೊಳಲೂದುವದನ್ನು ಕೇಳಬೇಕೆಂದಿದ್ದೀರೋ? ರೂಬೇನ್ಯರು ನೀರಿನ ಕಾಲುವೆಗಳ ಬಳಿಯಲ್ಲಿ ಮಾಡಿದ ವಿಚಾರಗಳು ಬಹು ಘನವಾದವುಗಳೇ ಸರಿ.
Kannada Bible (KNCL) BSI 2016
ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು: ರೂಬೇನ್ಯರೇ, ನೀವೇಕೆ ಕೂತಿರಿ ಕುರಿಹಟ್ಟಿಗಳಲಿ? ಮಂದೆಗಳ ಮಧ್ಯೆಯಲಿ ಕೇಳಬೇಕೆಂದೋ ಅಪಾಯದ ಸಿಳ್ಳು ಸದ್ದನು? ಹೌದು ರೂಬೇನ್ಯರ ಮಧ್ಯೆ ಕಾಣಿಸಿಕೊಂಡಿತು ವಾದವಿವಾದಗಳು, ಮನೋವೇದನೆಗಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮಂದೆಗಳ ಕೂಗನ್ನು ಕೇಳಿ, ನೀನು ಕುರಿ ಹಟ್ಟಿಗಳ ಬಳಿಯಲ್ಲಿ ಇದ್ದದ್ದೇನು? ರೂಬೇನ್ಯರ ನಡುವೆ ಹೃದಯದ ಮಹಾ ಪರಿಶೋಧನೆಗಳು ಇದ್ದವು.