Judges 5:25 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಸೀಸೆರನು ನೀರು ಕೇಳಿದನು; ಯಾಯೇಲಳು ಅವನಿಗೆ ಹಾಲು ಕೊಟ್ಟಳು. ಅರಸನಿಗೆ ಯೋಗ್ಯವಾದ ಬಟ್ಟಲಲ್ಲಿ ಅವಳು ಅವನಿಗೆ ಕೆನೆಯನ್ನು ತಂದಳು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀರು ಕೇಳಿದನು, ಹಾಲು ಕೊಟ್ಟಳು; ಉತ್ತಮ ಪಾತ್ರೆಯಲ್ಲಿ ಮಜ್ಜಿಗೆ ಕೊಟ್ಟಳು.
Kannada BSI Bible 2016
ಅವನು ನೀರನ್ನು ಕೇಳಿ ದನು; ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀರು ಕೇಳಿದನು, ಹಾಲು ಕೊಟ್ಟಳು; ಉತ್ತಮಪಾತ್ರೆಯಲ್ಲಿ ಮಜ್ಜಿಗೆಕೊಟ್ಟಳು.
Kannada Bible (KNCL) BSI 2016
ನೀರು ಕೇಳಲು ಹಾಲು ಕೊಟ್ಟಳು ಉತ್ತಮ ಪಾತ್ರೆಯಲ್ಲಿ ಮೊಸರು ಕೊಟ್ಟಳು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವನು ನೀರನ್ನು ಕೇಳಿದನು. ಅವಳು ಹಾಲು ಕೊಟ್ಟಳು; ಅಮೂಲ್ಯವಾದ ಬಟ್ಟಲಿನಲ್ಲಿ ಬೆಣ್ಣೆಯನ್ನು ತಂದಿಟ್ಟಳು.