Judges 5:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವರು ಹೊಸ ದೇವರುಗಳನ್ನು ಆರಿಸಿಕೊಂಡರು; ಅದಕ್ಕಾಗಿ ಅವರು ತಮ್ಮ ಪಟ್ಟಣ ದ್ವಾರಗಳಲ್ಲಿ ಯುದ್ಧ ಮಾಡಬೇಕಾಯಿತು. ಇಸ್ರೇಲರ ನಲವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಉರುಬಾಗಿಲವರೆಗೂ ಬಂದಿತ್ತು. ಇಸ್ರಾಯೇಲರ ನಲ್ವತ್ತು ಸಾವಿರ ಸೈನಿಕರ ಮಧ್ಯದಲ್ಲಿ ಗುರಾಣಿ ಬರ್ಜಿಗಳು ಇರಲೇ ಇಲ್ಲ.
Kannada BSI Bible 2016
ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?
Kannada BSI JV (ಕನ್ನಡ ಸತ್ಯವೇದವು J.V. (BSI))
ಜನರು ಅನ್ಯದೇವತೆಗಳನ್ನು ಆರಿಸಿಕೊಂಡಿದ್ದರು; ಯುದ್ಧವು ಊರುಬಾಗಲವರೆಗೆ ಬಂದಿತ್ತು. ಇಸ್ರಾಯೇಲ್ಯರ ನಾಲ್ವತ್ತು ಸಾವಿರ ಸೈನಿಕರಲ್ಲಿ ಒಬ್ಬನಿಗೂ ಗುರಾಣಿ ಬರ್ಜಿಗಳು ಇದ್ದಿಲ್ಲ.
Kannada Bible (KNCL) BSI 2016
ಆರಿಸಿಕೊಂಡಿದ್ದರು ಜನರು ಅನ್ಯ ದೇವತೆಗಳನು ಊರಬಾಗಿಲವರೆಗೆ ಬಂದಿತು ಕದನಕಾಳಗಗಳು ಇರಲಿಲ್ಲ ಗುರಾಣಿ, ಭರ್ಜಿಗಳಾವು ಓರ್ವರಲ್ಲೂ ಇಸ್ರಯೇಲರಾ ನಾಲ್ವತ್ತು ಸಾವಿರ ಸೈನಿಕರಲ್ಲೂ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು ಹೊಸ ದೇವರುಗಳನ್ನು ಆಯ್ದುಕೊಂಡರು. ಆಗ ಯುದ್ಧವು ಬಾಗಿಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಲವತ್ತು ಸಾವಿರ ಸೈನಿಕರಲ್ಲಿ ಗುರಾಣಿಯೂ, ಕಠಾರಿಯೂ ಇರಲಿಲ್ಲ.