Judges 6:29 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ನಗರದ ಜನರು ಒಬ್ಬರಿಗೊಬ್ಬರು, “ನಮ್ಮ ಯಜ್ಞವೇದಿಕೆಯನ್ನು ಯಾರು ಕೆಡವಿದರು? ನಮ್ಮ ಅಶೇರಸ್ತಂಭವನ್ನು ಯಾರು ಕಡಿದುಹಾಕಿದರು? ಈ ಹೊಸ ಯಜ್ಞವೇದಿಕೆಯ ಮೇಲೆ ಈ ಹೋರಿಯನ್ನು ಯಾರು ಸರ್ವಾಂಗಹೋಮ ಮಾಡಿದರು?” ಎಂಬ ಹಲವಾರು ಪ್ರಶ್ನೆಗಳನ್ನು ಕೇಳಿ ಇದೆಲ್ಲವನ್ನು ಮಾಡಿದವರು ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. “ಯೋವಾಷನ ಮಗನಾದ ಗಿದ್ಯೋನನು ಇದನ್ನೆಲ್ಲ ಮಾಡಿದನು” ಎಂದು ಯಾರೋ ಹೇಳಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಹೀಗೆ ಮಾಡಿದವರಾರು?” ಎಂದು ಒಬ್ಬರನ್ನೊಬ್ಬರು ವಿಚಾರಿಸುವಲ್ಲಿ ಯೋವಾಷನ ಮಗನಾದ ಗಿದ್ಯೋನನೇ ಎಂದು ತಿಳಿದು ಬಂದಿತು.
Kannada BSI Bible 2016
ಆಗ ಅವರು ಒಬ್ಬರಿಗೊ ಬ್ಬರು--ಈ ಕಾರ್ಯವನ್ನು ಮಾಡಿದವನಾರು ಅಂದರು. ಅವರು ವಿಚಾರಿಸಿ ಕೇಳಿದಾಗ ಅವರು--ಯೋವಾಷನ ಮಗನಾದ ಗಿದ್ಯೋನನು ಈ ಕಾರ್ಯ ಮಾಡಿದನು ಅಂದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಹೀಗೆ ಮಾಡಿದವರಾರು ಎಂದು ಒಬ್ಬರನ್ನೊಬ್ಬರು ವಿಚಾರಿಸುವಲ್ಲಿ ಯೋವಾಷನ ಮಗನಾದ ಗಿದ್ಯೋನನೇ ಎಂದು ಗೊತ್ತಾಗಲು
Kannada Bible (KNCL) BSI 2016
“ಹೀಗೆ ಮಾಡಿದವರಾರು?” ಎಂದು ಒಬ್ಬರನ್ನೊಬ್ಬರು ವಿಚಾರಿಸಿದರು. ಯೋವಾಷನ ಮಗನಾದ ಗಿದ್ಯೋನನೇ ಎಂದು ಗೊತ್ತಾಯಿತು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಅವರು ಒಬ್ಬರಿಗೊಬ್ಬರು, “ಈ ಕಾರ್ಯವನ್ನು ಮಾಡಿದವನ್ಯಾರು?” ಎಂದರು. ವಿಚಾರಿಸಿ ಕೇಳಿದಾಗ, ಅವರು, “ಯೋವಾಷನ ಮಗ ಗಿದ್ಯೋನನು ಈ ಕಾರ್ಯ ಮಾಡಿದನು,” ಎಂದರು.