Judges 6:31 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತನ್ನ ಸುತ್ತಲೂ ನಿಂತಿದ್ದ ಜನರಿಗೆ ಯೋವಾಷನು, “ನೀವು ಬಾಳನ ಪಕ್ಷವನ್ನು ವಹಿಸುವಿರಾ? ನೀವು ಬಾಳನನ್ನು ರಕ್ಷಿಸುವಿರಾ? ಬಾಳನ ಪಕ್ಷದವರನ್ನು ಬೆಳಗಾಗುವುದರೊಳಗೆ ಕೊಂದು ಬಿಡಲಾಗುವುದು. ಬಾಳನು ನಿಜವಾಗಿಯೂ ದೇವರಾಗಿದ್ದರೆ ಅವನ ಯಜ್ಞವೇದಿಕೆಯನ್ನು ಬೀಳಿಸುವಾಗ ಅವನು ತನ್ನ ರಕ್ಷಣೆಯನ್ನು ಏಕೆ ಮಾಡಿಕೊಳ್ಳಲಿಲ್ಲ?” ಅಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೋವಾಷನು ತನಗೆ ವಿರೋಧವಾಗಿ ನಿಂತವರೆಲ್ಲರಿಗೆ, “ಬಾಳನಿಗೋಸ್ಕರ ನೀವು ವ್ಯಾಜ್ಯಮಾಡಬೇಕೋ? ನೀವು ಅವನನ್ನು ರಕ್ಷಿಸಬೇಕೋ? ಅವನಿಗಾಗಿ ವ್ಯಾಜ್ಯಮಾಡುವವರು ಈ ಹೊತ್ತೇ ಕೊಲ್ಲಲ್ಪಡಲಿ. ಬಾಳನು ದೇವನಾಗಿದ್ದರೆ ತನ್ನ ಯಜ್ಞವೇದಿಯನ್ನು ಕೆಡವಿಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯಮಾಡಲಿ” ಎಂದನು.
Kannada BSI Bible 2016
ಆದರೆ ಯೋವಾಷನು ತನಗೆ ವಿರೋಧವಾಗಿ ನಿಂತಿದ್ದ ಸಮಸ್ತರಿಗೂ--ನೀವು ಬಾಳನಿ ಗಾಗಿ ವ್ಯಾಜ್ಯವಾಡುವಿರೋ? ನೀವು ಅವನನ್ನು ರಕ್ಷಿಸು ವಿರೋ? ಅವನಿಗಾಗಿ ವ್ಯಾಜ್ಯಮಾಡುವವನು ಈ ಉದಯ ಕಾಲದಲ್ಲೇ ಕೊಲ್ಲಲ್ಪಡಲಿ; ಅವನು ದೇವರಾ ದರೆ ತನ್ನ ಬಲಿಪೀಠವನ್ನು ಕೆಡವಿಬಿಟ್ಟಿದ್ದಾನೆಂದು ತನಗೋಸ್ಕರ ವ್ಯಾಜ್ಯವಾಡಲಿ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯೋವಾಷನು ತನಗೆ ವಿರೋಧವಾಗಿ ನಿಂತವರೆಲ್ಲರಿಗೆ - ಬಾಳನಿಗೋಸ್ಕರ ನೀವು ವ್ಯಾಜ್ಯವಾಡಬೇಕೋ? ನೀವು ಅವನನ್ನು ರಕ್ಷಿಸಬೇಕೋ? ಅವನಿಗಾಗಿ ವ್ಯಾಜ್ಯವಾಡುವವರು ಈ ಹೊತ್ತೇ ಕೊಲ್ಲಲ್ಪಡಲಿ. ಅವನು ದೇವನಾಗಿದ್ದರೆ ತನ್ನ ಯಜ್ಞವೇದಿಯನ್ನು ಕೆಡವಿ ಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ ಎಂದನು.
Kannada Bible (KNCL) BSI 2016
ಯೋವಾಷನು ತನಗೆ ವಿರುದ್ಧವಾಗಿ ನಿಂತವರೆಲ್ಲರಿಗೆ, “ಬಾಳನ ಪರ ನೀವು ವ್ಯಾಜ್ಯಮಾಡಬೇಕೆ? ನೀವು ಅವನನ್ನು ರಕ್ಷಿಸಬೇಕೇ? ಅವನಿಗಾಗಿ ವ್ಯಾಜ್ಯಮಾಡುವವರು ಬೆಳಗಾಗುವಷ್ಟರಲ್ಲಿ ಕೊಲ್ಲಲ್ಪಡಲಿ. ಅವನು ದೇವನಾಗಿದ್ದರೆ ತನ್ನ ಬಲಿಪೀಠವನ್ನು ಕೆಡವಿಬಿಟ್ಟದ್ದಕ್ಕಾಗಿ ತಾನೇ ವ್ಯಾಜ್ಯವಾಡಲಿ,” ಎಂದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಯೋವಾಷನು ತನಗೆ ವಿರೋಧವಾಗಿ ನಿಂತಿದ್ದ ಸಮಸ್ತರಿಗೂ, “ನೀವು ಬಾಳನಿಗಾಗಿ ವ್ಯಾಜ್ಯವಾಡುವಿರೋ? ನೀವು ಅವನನ್ನು ರಕ್ಷಿಸುವಿರೋ? ಅವನಿಗಾಗಿ ವ್ಯಾಜ್ಯ ಮಾಡುವವನು ಈ ಉದಯಕಾಲದಲ್ಲೇ ಹತನಾಗಲಿ. ಅವನು ದೇವರಾದರೆ ತನ್ನ ಬಲಿಪೀಠವನ್ನು ಕೆಡವಿದ್ದರಿಂದ, ಅವನು ತನ್ನನ್ನು ರಕ್ಷಿಸಿಕೊಳ್ಳಲಿ” ಎಂದನು.