Judges 6:9 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ನಾನು ನಿಮ್ಮನ್ನು ಬಲಶಾಲಿಗಳಾದ ಈಜಿಪ್ಟಿನ ಜನರಿಂದ ರಕ್ಷಿಸಿದೆ. ತರುವಾಯ ಕಾನಾನ್ಯರು ನಿಮ್ಮನ್ನು ಪೀಡಿಸಿದರು. ಆಗ ಮತ್ತೊಮ್ಮೆ ನಾನು ನಿಮ್ಮನ್ನು ರಕ್ಷಿಸಿದೆ. ನಾನು ಅವರನ್ನು ಅವರ ಪ್ರದೇಶದಿಂದ ಓಡಿಸಿ ಅದನ್ನು ನಿಮಗೆ ಕೊಟ್ಟೆ’
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಐಗುಪ್ತ್ಯರಿಂದ ನಿಮ್ಮನ್ನು ಬಿಡಿಸಿದ್ದಲ್ಲದೆ ಬೇರೆ ಎಲ್ಲಾ ಬಾಧಕರಿಂದಲೂ ನಿಮ್ಮನ್ನು ಬಿಡಿಸಿ, ಅವರನ್ನು ನಿಮ್ಮೆದುರಿನಿಂದ ಓಡಿಸಿಬಿಟ್ಟು, ಅವರ ದೇಶವನ್ನು ನಿಮಗೆ ಕೊಟ್ಟೆನು.
Kannada BSI Bible 2016
ಅವನು ಅವರಿಗೆ ಹೇಳಿದ್ದೇನಂದರೆ--ಇಸ್ರಾಯೇಲಿನ ದೇವ ರಾದ ಕರ್ತನು ಹೇಳುವದೇನಂದರೆ--ನಾನು ನಿಮ್ಮನ್ನು ಐಗುಪ್ತದಿಂದ ಬರಮಾಡಿದೆನು; ದಾಸತ್ವದ ಮನೆ ಯಿಂದ ಹೊರಡ ಮಾಡಿದೆನು; ಐಗುಪ್ತ್ಯರ ಕೈಯಿಂದ ಲೂ ನಿಮ್ಮನ್ನು ಬಾಧೆಪಡಿಸುವವರೆಲ್ಲರ ಕೈಯಿಂದಲೂ ತಪ್ಪಿಸಿ ಅವರನ್ನು ನಿಮ್ಮ ಮುಂದೆ ಹೊರಗೆಹಾಕಿ ಅವರ ದೇಶವನ್ನು ನಿಮಗೆ ಕೊಟ್ಟೆನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಐಗುಪ್ತ್ಯರಿಂದ ನಿಮ್ಮನ್ನು ಬಿಡಿಸಿದ್ದಲ್ಲದೆ ಬೇರೆ ಎಲ್ಲಾ ಬಾಧಕರಿಂದಲೂ ನಿಮ್ಮನ್ನು ಬಿಡಿಸಿ ಅವರನ್ನು ನಿಮ್ಮೆದುರಿನಿಂದ ಅಟ್ಟಿಬಿಟ್ಟು ಅವರ ದೇಶವನ್ನು ನಿಮಗೆ ಕೊಟ್ಟೆನು.
Kannada Bible (KNCL) BSI 2016
ಈಜಿಪ್ಟಿನವರಿಂದ ನಿಮ್ಮನ್ನು ಬಿಡಿಸಿದೆನಲ್ಲದೆ ಬೇರೆ ಎಲ್ಲಾ ಶೋಷಕರಿಂದ ನಿಮ್ಮನ್ನು ಪಾರುಮಾಡಿ, ನಿಮ್ಮ ಕಣ್ಮುಂದೆಯೇ ಅವರನ್ನು ಅಟ್ಟಿಬಿಟ್ಟು, ಅವರ ನಾಡನ್ನು ನಿಮಗೆ ಕೊಟ್ಟೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನಿಮ್ಮನ್ನು ಈಜಿಪ್ಟಿನವರ ಕೈಯಿಂದ ತಪ್ಪಿಸಿ, ಅವರನ್ನು ನಿಮ್ಮ ಮುಂದೆ ಹೊರಗೆ ಹಾಕಿ, ಅವರ ದೇಶವನ್ನು ನಿಮಗೆ ಕೊಟ್ಟೆನು.