Judges 8:11 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗಿದ್ಯೋನ ಮತ್ತು ಅವನ ಸೈನಿಕರು ಕಾಡುಗೊಲ್ಲರ ಪ್ರದೇಶದ ಮಾರ್ಗವನ್ನು ಬಳಸಿದರು. ಆ ಮಾರ್ಗವು ನೋಬಹ, ಯೊಗ್ಬೆಹಾ ನಗರಗಳ ಪೂರ್ವಕ್ಕೆ ಇದೆ. ಗಿದ್ಯೋನನು ಕರ್ಕೋರ ನಗರಕ್ಕೆ ಬಂದು ಶತ್ರುಗಳ ಮೇಲೆ ಧಾಳಿ ಮಾಡಿದನು. ಶತ್ರುಸೈನ್ಯವು ಈ ಧಾಳಿಯನ್ನು ನಿರೀಕ್ಷಿಸಿರಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು.
Kannada BSI Bible 2016
ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಮೂಡಣದಲ್ಲಿದ್ದ ಡೇರೆಗಳಲ್ಲಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಆ ದಂಡನ್ನು ಹೊಡೆದು ಬಿಟ್ಟನು. ಯಾಕಂದರೆ ಆ ದಂಡು ಭದ್ರವಾಗಿತ್ತು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗಿದ್ಯೋನನು ಕಾಡುಗೊಲ್ಲರ ಪ್ರದೇಶಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳುಕೊಂಡಿದ್ದ ಆ ಪಾಳೆಯದ ಮೇಲೆ ಬಿದ್ದನು.
Kannada Bible (KNCL) BSI 2016
ಗಿದ್ಯೋನನು ಕಾಡುಗೊಲ್ಲರ ಪ್ರದೇಶ ಮಾರ್ಗವಾಗಿ ನೋಬಹ, ಯೊಗ್ಬೆಹಾ ಇವುಗಳ ಪೂರ್ವದಿಕ್ಕಿಗೆ ಹೋಗಿ ನಿರ್ಭಯದಿಂದ ಇಳಿದುಕೊಂಡಿದ್ದ ಆ ಪಾಳೆಯದ ಮೇಲೆ ದಾಳಿಮಾಡಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗಿದ್ಯೋನನು ನೋಬಹ, ಯೊಗ್ಬೆಹಾ ಇವುಗಳ ಪೂರ್ವದಲ್ಲಿದ್ದ ಡೇರೆಗಳಲ್ಲಿ ಸುರಕ್ಷಿತವಾಗಿ ವಾಸಿಸಿರುವವರ ಮಾರ್ಗವಾಗಿ ಹೋಗಿ ಅವರು ನಿರೀಕ್ಷಿಸದ ಸಮಯದಲ್ಲಿ ಅವರ ಮೇಲೆ ದಾಳಿಮಾಡಿದರು.