Judges 8:20 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗಿದ್ಯೋನನು ಎತೆರನ ಕಡೆಗೆ ತಿರುಗಿದನು. ಎತೆರನು ಗಿದ್ಯೋನನ ಹಿರಿಯ ಮಗ. ಗಿದ್ಯೋನನು ಅವನಿಗೆ, “ಈ ಅರಸರನ್ನು ಕೊಲ್ಲು” ಎಂದು ಹೇಳಿದನು. ಆದರೆ ಎತೆರನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟನು. ಅವನು ತನ್ನ ಕತ್ತಿಯನ್ನು ಹೊರ ತೆಗೆಯಲಿಲ್ಲ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ತನ್ನ ಹಿರೀ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು” ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
Kannada BSI Bible 2016
ತನ್ನ ಚೊಚ್ಚಲ ಮಗನಾದ ಎತೆರನಿಗೆ--ನೀನೆದ್ದು ಅವರನ್ನು ಕೊಂದುಹಾಕು ಅಂದನು. ಆದರೆ ಆ ಯುವಕನು ತನ್ನ ಕತ್ತಿಯನ್ನು ಬಿಚ್ಚದೆ ಹೋದನು; ಯಾಕಂದರೆ ಅವನು ಇನ್ನೂ ಹುಡುಗನಾದದರಿಂದ ಭಯಪಟ್ಟನು.
Kannada BSI JV (ಕನ್ನಡ ಸತ್ಯವೇದವು J.V. (BSI))
ತನ್ನ ಹಿರೀ ಮಗನಾದ ಎತೆರನಿಗೆ - ನೀನೆದ್ದು ಇವರನ್ನು ಕೊಂದುಹಾಕು ಅಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
Kannada Bible (KNCL) BSI 2016
ತನ್ನ ಹಿರಿಯ ಮಗನಾದ ಎತೆರನಿಗೆ, “ನೀನೆದ್ದು ಇವರನ್ನು ಕೊಂದುಹಾಕು,” ಎಂದನು. ಆದರೆ ಅವನು ಇನ್ನೂ ಹುಡುಗನಾಗಿದ್ದುದರಿಂದ ಭಯಪಟ್ಟು ಕತ್ತಿಯನ್ನು ಹಿರಿಯಲೇ ಇಲ್ಲ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ತನ್ನ ಚೊಚ್ಚಲಮಗನಾದ ಎತೆರನಿಗೆ, “ನೀನೆದ್ದು ಅವರನ್ನು ಕೊಂದುಹಾಕು,” ಎಂದನು. ಆದರೆ ಆ ಯುವಕನು ತನ್ನ ಖಡ್ಗವನ್ನು ಬಿಚ್ಚದೆ ಹೋದನು. ಏಕೆಂದರೆ ಅವನು ಇನ್ನೂ ಹುಡುಗನಾದ್ದರಿಂದ ಭಯಪಟ್ಟನು.