Judges 8:25 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಇಸ್ರೇಲರು, “ನೀನು ಕೇಳಿದ್ದನ್ನು ಸಂತೋಷದಿಂದ ಕೊಡುತ್ತೇವೆ” ಎಂದು ಹೇಳಿ ನೆಲದ ಮೇಲೆ ಒಂದು ಮೇಲಂಗಿಯನ್ನು ಹಾಸಿದರು. ಪ್ರತಿಯೊಬ್ಬನು ಒಂದೊಂದು ಮುರುವನ್ನು ಆ ಅಂಗಿಯ ಮೇಲೆ ಎಸೆದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಿದ್ಯೋನನ ಬಿನ್ನಹಕ್ಕೆ ಇಸ್ರಾಯೇಲ್ಯರು, “ನಾವು ಸಂತೋಷದಿಂದ ಕೊಡುವೆವು” ಎಂದು ಹೇಳಿ, ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಓಲೆಗಳನ್ನು ಇಟ್ಟುಬಿಟ್ಟರು.
Kannada BSI Bible 2016
ಅವರು--ನಾವು ಇಷ್ಟಪೂರ್ವಕವಾಗಿ ಕೊಡುವೆವು ಎಂದು ಹೇಳಿ ಒಂದು ವಸ್ತ್ರವನ್ನು ಹಾಸಿ ಅಲ್ಲಿ ಅವರವರು ಕೊಳ್ಳೆ ಹೊಡೆದ ವಾಲೆಗಳನ್ನು ಹಾಕಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ನಾವು ಸಂತೋಷದಿಂದ ಕೊಡುವೆವು ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟುಬಿಟ್ಟರು.
Kannada Bible (KNCL) BSI 2016
ಗಿದ್ಯೋನಿನ ಬಿನ್ನಹಕ್ಕೆ ಇಸ್ರಯೇಲರು, “ನಾವು ಸಂತೋಷದಿಂದ ಕೊಡುತ್ತೇವೆ,” ಎಂದು ಹೇಳಿ ಅಲ್ಲಿ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ತಾವು ಕೊಳ್ಳೆಯಾಗಿ ತಂದ ಮುರುವುಗಳನ್ನು ಇಟ್ಟರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅವರು, “ನಾವು ಇಷ್ಟಪೂರ್ವಕವಾಗಿ ಕೊಡುತ್ತೇವೆ,” ಎಂದು ಹೇಳಿ, ಒಂದು ವಸ್ತ್ರವನ್ನು ಹಾಸಿ, ಅಲ್ಲಿ ಅವರವರು ಕೊಳ್ಳೆಹೊಡೆದ ಬಂಗಾರದ ಓಲೆಗಳನ್ನು ಹಾಕಿದರು.