Judges 8:7 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅದಕ್ಕೆ ಗಿದ್ಯೋನನು, “ನೀವು ನಮಗೆ ಆಹಾರವನ್ನು ಕೊಡುವುದಿಲ್ಲವಾದರೆ ಜೆಬಹನನ್ನು ಮತ್ತು ಚಲ್ಮುನ್ನನನ್ನು ಬಂಧಿಸಲು ಯೆಹೋವನೇ ನಮಗೆ ಸಹಾಯ ಮಾಡುತ್ತಾನೆ. ಆಮೇಲೆ ನಾನು ಇಲ್ಲಿಗೆ ಬಂದು ನಿಮ್ಮನ್ನು ಮರುಳುಗಾಡಿನ ಮುಳ್ಳುಗಳಿಂದಲೂ ಕುರುಚಲುಗಳಿಂದಲೂ ಹೊಡಿಸುತ್ತೇನೆ” ಎಂದು ಉತ್ತರಿಸಿದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಗಿದ್ಯೋನನು ಅವರಿಗೆ, “ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಕಾಡಿನಲ್ಲಿರುವ ಜಾಲಿಮುಳ್ಳುಗಳಿಂದಲೂ, ಕಾರೆಗಿಡಗಳಿಂದಲೂ ಹೊಡಿಸುವೆನು” ಎಂದು ಹೇಳಿದನು.
Kannada BSI Bible 2016
ಆಗ ಗಿದ್ಯೋನನು--ಹಾಗಾದರೆ ಕರ್ತನು ಜೆಬಹನನ್ನೂ ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿ ಕೊಟ್ಟ ತರುವಾಯ ನಿಮ್ಮ ಮಾಂಸವನ್ನು ಅರಣ್ಯದ ಮುಳ್ಳುಗಳಿಂದಲೂ ನೆಗ್ಗಿಲು ಮುಳ್ಳುಗಳಿಂದಲೂ ಹರಿದುಬಿಡುವೆನು ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಗಿದ್ಯೋನನು ಅವರಿಗೆ - ಒಳ್ಳೇದು, ಯೆಹೋವನು ಜೆಬಹ, ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿ ಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು ಎಂದು ಹೇಳಿದನು.
Kannada Bible (KNCL) BSI 2016
ಆಗ ಗಿದ್ಯೋನನು ಅವರಿಗೆ, “ಒಳ್ಳೆಯದು, ಸರ್ವೇಶ್ವರ ಜೆಬಹ ಮತ್ತು ಚಲ್ಮುನ್ನ ಎಂಬವರನ್ನು ನನ್ನ ಕೈಗೆ ಒಪ್ಪಿಸಿಕೊಟ್ಟ ತರುವಾಯ ನಾನು ನಿಮ್ಮನ್ನು ಜಾಲಿ ಮುಳ್ಳುಗಳಿಂದಲೂ ಕಾರೆಗಿಡಗಳಿಂದಲೂ ಹೊಡಿಸುವೆನು,” ಎಂದು ಹೇಳಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆಗ ಗಿದ್ಯೋನನು, “ಆಗ ಯೆಹೋವ ದೇವರು ಜೆಬಹನನ್ನೂ, ಚಲ್ಮುನ್ನನನ್ನೂ ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟ ತರುವಾಯ, ನಿಮ್ಮ ಮಾಂಸವನ್ನು ಮರುಭೂಮಿಯ ಮುಳ್ಳುಗಳಿಂದಲೂ, ಕಾರೆಗಿಡದ ಮುಳ್ಳುಗಳಿಂದಲೂ ಹೊಡಿಸುವೆನು,” ಎಂದನು.