Judges 9:16 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡುವಾಗ ಪ್ರಾಮಾಣಿಕರಾಗಿದ್ದರೆ, ಅವನ ಸಂಗಡ ಸಂತೋಷದಿಂದಿರಿ. ನೀವು ಯೆರುಬ್ಬಾಳ ಮತ್ತು ಅವನ ಕುಟುಂಬದವರೊಡನೆ ನ್ಯಾಯದಿಂದ ನಡೆದುಕೊಂಡಿದ್ದರೆ ಒಳ್ಳೆಯದೇ ಸರಿ. ನೀವು ಯೆರುಬ್ಬಾಳನಿಗೋಸ್ಕರ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದರೆ ಒಳ್ಳೆಯದು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ?
Kannada BSI Bible 2016
ನೀವು ಈಗ ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ಸತ್ಯದಿಂದಲೂ ಯಥಾರ್ಥದಿಂದಲೂ ಮಾಡಿದ್ದಾದರೆ, ಯೆರುಬ್ಬಾಳನಿಗೂ ಅವನ ಮನೆಗೂ ಒಳ್ಳೇದನ್ನು ಮಾಡಿದ್ದರೆ
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ?
Kannada Bible (KNCL) BSI 2016
“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯಸಮ್ಮತವೇ? ಅದು ಧರ್ಮಕಾರ್ಯವೇ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕಾಗಿ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರ ಮಾಡಿದಿರೋ?
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ನೀವು ಈಗ ಅಬೀಮೆಲೆಕನನ್ನು ಅರಸನಾಗಿ ಮಾಡಿದ್ದು ಸತ್ಯದಲ್ಲಿಯೂ, ಯಥಾರ್ಥದಿಂದಲೂ ಮಾಡಿರುವುದಾದರೆ ಮತ್ತು ಯೆರುಬ್ಬಾಳನಿಗೂ, ಅವನ ಮನೆಗೂ ಒಳ್ಳೆಯದನ್ನು ಮಾಡಿದ್ದರೆ,