Judges 9:27 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಶೆಕೆಮಿನ ಜನರು ದ್ರಾಕ್ಷಿಯನ್ನು ಕೊಯಿದುಕೊಂಡು ಬರಲು ತಮ್ಮ ಹೊಲಗಳಿಗೆ ಹೋದರು. ಆ ದ್ರಾಕ್ಷಿಯನ್ನು ಹಿಂಡಿ ದ್ರಾಕ್ಷಾರಸ ಮಾಡಿದರು. ಆಮೇಲೆ ತಮ್ಮ ದೇವರ ಮಂದಿರದಲ್ಲಿ ಒಂದು ಉತ್ಸವನ್ನು ಮಾಡಿದರು. ಆ ಜನರು ತಿಂದು ಕುಡಿದು, ಅಬೀಮೆಲೆಕನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು.
Kannada BSI Bible 2016
ಹೊರಗೆ ಹೋಗಿ ತಮ್ಮ ದ್ರಾಕ್ಷೇ ಫಲಗಳನ್ನು ಕೊಯಿದು ಅವು ಗಳನ್ನು ತುಳಿದು ಸಂತೋಷಪಟ್ಟು ತಮ್ಮ ದೇವರ ಮನೆಯೊಳಗೆ ಹೋಗಿ ತಿಂದು ಕುಡಿದು ಅಬೀಮೆಲೆಕ ನನ್ನು ಶಪಿಸಿದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಆ ಊರಿನವರು ಒಂದಾನೊಂದು ದಿವಸ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು ಆಲೆಗಳಲ್ಲಿ ರಸತೆಗೆದು ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು.
Kannada Bible (KNCL) BSI 2016
ಆ ಊರಿನವರು ಒಂದು ದಿವಸ ತಮ್ಮ ದ್ರಾಕ್ಷಾಫಲಗಳನ್ನು ಕೊಯ್ದು, ಆಲೆಗಳಲ್ಲಿ ರಸ ತೆಗೆದು, ತಮ್ಮ ದೇವರ ಗುಡಿಗೆ ಹೋಗಿ, ಹಬ್ಬಮಾಡಿ, ಉಂಡು, ಕುಡಿದು ಅಬೀಮೆಲೆಕನನ್ನು ಶಪಿಸಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೊರಗೆ ಹೋಗಿ ತಮ್ಮ ದ್ರಾಕ್ಷಿ ಫಲಗಳನ್ನು ಕೊಯ್ದು, ಅವುಗಳನ್ನು ತುಳಿದು ಸಂತೋಷಪಟ್ಟು, ತಮ್ಮ ದೇವರ ಮನೆಯೊಳಗೆ ಹೋಗಿ, ತಿಂದು ಕುಡಿದು ಅಬೀಮೆಲೆಕನನ್ನು ಶಪಿಸಿದರು.