Judges 9:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಬೆಳಗಾಗಿ ಸೂರ್ಯನು ಮೇಲೇರಿದ ತರುವಾಯ ನಗರದ ಮೇಲೆ ಧಾಳಿಮಾಡಬೇಕು. ಗಾಳ ಮತ್ತು ಅವನ ಜನರು ನಿನ್ನ ಸಂಗಡ ಯುದ್ಧ ಮಾಡುವುದಕ್ಕೆ ನಗರದಿಂದ ಹೊರಗೆ ಬರುತ್ತಾರೆ. ಅವರು ಹೊರಗೆ ಬಂದಾಗ ನಿನಗೆ ತೋರಿದಂತೆ ಅವರಿಗೆ ಮಾಡು.”
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು” ಎಂದು ಹೇಳಿಸಿದನು.
Kannada BSI Bible 2016
ಹೊತ್ತಾರೆ ಸೂರ್ಯನು ಉದಯಿಸುವಾಗ ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು; ಇಗೋ, ಅವನೂ ಅವನ ಸಂಗಡ ಇರುವ ಜನರೂ ನಿಮಗೆದು ರಾಗಿ ಹೊರಟು ಬರುವಾಗ ನಿನಗೆ ಅನುಕೂಲ ತೋರಿದ ಹಾಗೆ ಅವನಿಗೆ ಮಾಡಬಹುದು ಎಂದು ಹೇಳಿದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು; ಅವನೂ ಅವನ ಜೊತೆಯಲ್ಲಿರುವವರೂ ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು ಎಂದು ಹೇಳಿಸಿದನು.
Kannada Bible (KNCL) BSI 2016
ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು; ಅವನೂ ಅವನ ಜೊತೆಯಲ್ಲಿರುವವರೂ ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು,” ಎಂದು ಹೇಳಿಸಿದನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಹೊತ್ತಾರೆ ಸೂರ್ಯನು ಉದಯಿಸುವಾಗ, ನೀನು ಎದ್ದು ಪಟ್ಟಣದ ಮೇಲೆ ಬೀಳಬೇಕು. ಗಾಳನೂ, ಅವನ ಸಂಗಡ ಇರುವ ಜನರೂ ನಿಮಗೆದುರಾಗಿ ಹೊರಟು ಬರುವಾಗ, ನೀನು ನಿನ್ನ ಕೈಗೆ ಸರಿಬಂದ ಹಾಗೆ ಅವನಿಗೆ ಮಾಡಬೇಕು,” ಎಂದು ಹೇಳಿದನು.