Judges 9:36 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಗಾಳನು ಸೈನಿಕರನ್ನು ನೋಡಿದನು. ಗಾಳನು ಜೆಬುಲನಿಗೆ, “ಅಲ್ಲಿ ನೋಡು, ಬೆಟ್ಟ ಇಳಿದು ಜನರು ಬರುತ್ತಿದ್ದಾರೆ” ಎಂದನು. ಆದರೆ ಜೆಬುಲನು, “ನೀನು ಕೇವಲ ಬೆಟ್ಟದ ನೆರಳನ್ನು ನೋಡುತ್ತಿರುವೆ; ನೆರಳು ಜನರಂತೆ ಕಾಣಿಸುತ್ತಿದೆ” ಎಂದನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ” ಎಂದು ಹೇಳಿದನು. ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ” ಅನ್ನಲು
Kannada BSI Bible 2016
ಗಾಳನು ಆ ಜನರನ್ನು ಕಂಡಾಗ--ಇಗೋ, ಬೆಟ್ಟದ ಶಿಖರಗಳಿಂದ ಜನರು ಇಳಿದು ಬರುತ್ತಾರೆ ಎಂದು ಜೆಬುಲನಿಗೆ ಹೇಳಿದನು. ಜೆಬುಲನು ಅವನಿಗೆ--ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ನೋಡುತ್ತೀ ಅಂದನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಗಾಳನು ಅವರನ್ನು ಕಂಡು ಜೆಬುಲನಿಗೆ - ಇಗೋ, ಬೆಟ್ಟದ ಮೇಲಣಿಂದ ಜನರು ಬರುತ್ತಿದ್ದಾರೆ ಎಂದು ಹೇಳಲು ಜೆಬುಲನು ಅವನಿಗೆ - ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ ಅನ್ನಲು
Kannada Bible (KNCL) BSI 2016
ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ,” ಎಂದು ಹೇಳಲು ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ,” ಎಂದನು. ಅವನು ಪುನಃ,
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಗಾಳನು ಆ ಜನರನ್ನು ಕಂಡಾಗ, “ಬೆಟ್ಟದ ಶಿಖರಗಳಿಂದ ಜನರು ಬರುತ್ತಾರೆ,” ಎಂದು ಜೆಬೂಲನಿಗೆ ಹೇಳಿದರು. ಜೆಬೂಲನು ಅವನಿಗೆ, “ನೀನು ಬೆಟ್ಟಗಳ ನೆರಳನ್ನು ಮನುಷ್ಯರಂತೆ ಕಾಣುತ್ತೀ,” ಎಂದನು.