Judges 9:44 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಅಬೀಮೆಲೆಕ ಮತ್ತು ಅವನ ಗುಂಪಿನವರು ಓಡಿಕೊಂಡು ಶೆಕೆಮ್ ನಗರದ ಬಾಗಿಲಿನ ಹತ್ತಿರ ಒಂದು ಸ್ಥಳಕ್ಕೆ ಬಂದರು. ಉಳಿದ ಎರಡು ಗುಂಪಿನವರು ಹೊಲಗಳಲ್ಲಿದ್ದ ಜನರ ಕಡೆಗೆ ಓಡಿಹೋಗಿ ಅವರನ್ನು ಕೊಂದುಹಾಕಿದರು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.
Kannada BSI Bible 2016
ಅಬೀಮೆಲೆಕನೂ ಅವನ ಸಂಗಡ ಇದ್ದ ಜನರ ಗುಂಪೂ ಮುಂದಕ್ಕೆ ಓಡಿ ಪಟ್ಟಣದ ಪ್ರವೇಶ ದ್ವಾರದಲ್ಲಿ ನಿಂತರು. ಮಿಕ್ಕಾದ ಎರಡು ಗುಂಪು ಜನರು ಹೊಲದಲ್ಲಿರುವವರೆ ಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿಬಿಟ್ಟರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆವಿುನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.
Kannada Bible (KNCL) BSI 2016
ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿಬಂದು ಊರಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಅಬೀಮೆಲೆಕನೂ, ಅವನ ಸಂಗಡ ಇದ್ದ ಸೈನಿಕರ ಗುಂಪೂ ಮುಂದಕ್ಕೆ ಓಡಿ, ಪಟ್ಟಣದ ಬಾಗಿಲಿನ ಬಳಿ ನಿಂತರು. ಮಿಕ್ಕಾದ ಎರಡು ಗುಂಪಿನ ಜನರು, ಹೊಲದಲ್ಲಿರುವವರೆಲ್ಲರ ಮೇಲೆ ಬಿದ್ದು ಅವರನ್ನು ಹತಮಾಡಿದರು.