Lamentations 1:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಜೆರುಸಲೇಮ್ ಮಹಾಪಾಪ ಮಾಡಿತು. ಜೆರುಸಲೇಮ್ ಭಯಂಕರ ಪಾಪ ಮಾಡಿದ್ದಕ್ಕಾಗಿ ಅವಳು ಹಾಳುಬಿದ್ದ ನಗರವಾದಳು. ಜನರು ಅವಳನ್ನು ಹೀನೈಸುವಂತಾಗಿದೆ. ಮೊದಲು ಅವಳನ್ನು ಗೌರವಿಸುತ್ತಿದ್ದ ಎಲ್ಲ ಜನ ಈಗ ಅವಳನ್ನು ತಿರಸ್ಕರಿಸುತ್ತಾರೆ. ಏಕೆಂದರೆ ಅವರು ಅವಳ ಬೆತ್ತಲೆ ದೇಹವನ್ನು ನೋಡಿದರು. ಜೆರುಸಲೇಮ್ ನರಳಾಡುತ್ತಿದ್ದಾಳೆ. ಅವಳು ನಾಚಿಕೆಯಿಂದ ತನ್ನ ಮುಖವನ್ನು ತಗ್ಗಿಸಿಕೊಂಡಿದ್ದಾಳೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯೆರೂಸಲೇಮು ಪಾಪಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಮುಖಮುಚ್ಚಿ ದುಃಖಿಸುತ್ತಾಳೆ.
Kannada BSI Bible 2016
ಯೆರೂಸ ಲೇಮು ಘೋರವಾಗಿ ಪಾಪಮಾಡಿದೆ; ಆದದರಿಂದ ಅವಳು ತೆಗೆದುಹಾಕಲ್ಪಟ್ಟಿದ್ದಾಳೆ; ಅವಳನ್ನು ಸನ್ಮಾನಿಸಿ ದವರೆಲ್ಲರೂ ಅವಳನ್ನು ಹೀನೈಸುತ್ತಾರೆ; ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ; ಹೌದು, ಅವಳು ನಿಟ್ಟುಸಿರಿಟ್ಟು ಹಿಂದಕ್ಕೆ ತಿರುಗುತ್ತಾಳೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಕೆಯು ಪಾಪಮಾಡಿ ಮಾಡಿ ಅಶುದ್ಧಳಾಗಿದ್ದಾಳೆ; ಮೊದಲು ಆಕೆಯನ್ನು ಸನ್ಮಾನಿಸುತ್ತಿದ್ದವರು ಈಗ ಆಕೆಯ ಮಾನಭಂಗವನ್ನು ಕಂಡು ಹೀನೈಸುತ್ತಾರೆ; ಆಕೆಯು ಬೆನ್ನಮರೆಯಲ್ಲಿ ನರಳಾಡುತ್ತಾಳೆ.
Kannada Bible (KNCL) BSI 2016
ಜೆರುಸಲೇಮ್ ಅಶುದ್ಧಳಾದಳು ಪದೇ ಪದೇ ಪಾಪಮಾಡಿ. ಹೊಗಳುತ್ತಿದ್ದವರೇ ತೆಗಳುವವರಾದರು ಆಕೆಯ ನಗ್ನತೆಯನ್ನು ನೋಡಿ. ಆಕೆಯೋ ನಿಟ್ಟುಸಿರಿಡುತ್ತಿರುವಳು ಮುಖವನ್ನು ಮರೆಮಾಡಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯೆರೂಸಲೇಮು ಘೋರ ಪಾಪಮಾಡಿದೆ. ಆದ್ದರಿಂದ ಅವಳು ಅಶುದ್ಧಳಾಗಿದ್ದಾಳೆ. ಅವಳನ್ನು ಸನ್ಮಾನಿಸಿದವರೆಲ್ಲರೂ, ಅವಳನ್ನು ಹೀನೈಸುತ್ತಾರೆ. ಏಕೆಂದರೆ ಅವರು ಅವಳ ಬೆತ್ತಲೆತನವನ್ನು ನೋಡಿದ್ದಾರೆ. ಹೌದು, ಅವಳು ನರಳುತ್ತಾ ಹಿಂದಕ್ಕೆ ತಿರುಗುತ್ತಾಳೆ.