Lamentations 4:21 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಎದೋಮಿನ ಜನರೇ, ಸಂತೋಷವಾಗಿರಿ. ಊಚ್ ದೇಶದಲ್ಲಿ ವಾಸವಾಗಿರುವ ಜನರೇ, ಸಂತೋಷವಾಗಿರಿ. ಆದರೆ ಜ್ಞಾಪಕದಲ್ಲಿಟ್ಟುಕೊಂಡಿರಿ, ಯೆಹೋವನ ಕೋಪದ ಪಾತ್ರೆಯು ನಿಮ್ಮ ಬಳಿಗೂ ಬರುವುದು. ನೀವು ಆ ಪಾತ್ರೆಯಿಂದ ಕುಡಿಯುವಾಗ ಮತ್ತೇರಿದವರಾಗಿ ನಿಮ್ಮನ್ನು ನೀವೇ ಬೆತ್ತಲು ಮಾಡಿಕೊಳ್ಳುವಿರಿ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಊಚ್ ದೇಶದಲ್ಲಿ ವಾಸಿಸುವ ಎದೋಮೆಂಬ ಕನ್ಯೆಯೇ, ಹರ್ಷಿಸು, ಉಲ್ಲಾಸಗೊಳ್ಳು; ಆದರೆ ರೋಷಪಾನದ ಪಾತ್ರೆಯು ನಿನ್ನ ಪಾಲಿಗೂ ಬರುವುದು; ಅಮಲೇರಿದವಳಾಗಿ ನಿನ್ನನ್ನು ನೀನೇ ಬೆತ್ತಲೆಮಾಡಿಕೊಳ್ಳುವಿ.
Kannada BSI Bible 2016
ಎದೋಮಿನ ಮಗಳೇ, ಊಚ್‌ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು, ಸಂತೋಷಪಡು; ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವದು, ನೀನು ಕುಡಿದು ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.ಚೀಯೋನಿನ ಮಗಳೇ, ನಿನ್ನ ಅಕ್ರಮದ ಶಿಕ್ಷೆಯು ತೀರಿಹೋಯಿತು; ಆತನು ಇನ್ನು ಮೇಲೆ ನಿನ್ನನ್ನು ಸೆರೆಗೆ ಒಯ್ಯುವದಿಲ್ಲ. ಎದೋಮಿನ ಮಗಳೇ, ಆತನು ನಿನ್ನ ಅಕ್ರಮವನ್ನು ವಿಚಾರಿಸುವನು; ಆತನು ನಿನ್ನ ಪಾಪಗಳನ್ನು ಕಂಡು ಹಿಡಿಯುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ಊಚ್ ದೇಶದಲ್ಲಿ ವಾಸಿಸುವ ಎದೋಮೆಂಬ ಯುವತಿಯೇ, ಹರ್ಷಿಸು, ಉಲ್ಲಾಸಗೊಳ್ಳು; ಆದರೆ [ರೋಷಪಾನದ] ಪಾತ್ರೆಯು ನಿನ್ನ ಪಾಲಿಗೂ ಬರುವದು; ಅಮಲೇರಿದವಳಾಗಿ ನಿನ್ನನ್ನು ನೀನೇ ಬೆತ್ತಲೆ ಮಾಡಿಕೊಳ್ಳುವಿ.
Kannada Bible (KNCL) BSI 2016
‘ಊಚ’ ಮತ್ತು ‘ಎದೋಮ್’ ನಾರೀಮಣಿಗಳೇ, ಸಂತೋಷಿಸಿ ಉಲ್ಲಾಸಿಸುತ್ತಿರುವಿರಿ ಅಲ್ಲವೇ? ಆದರೆ ಖಂಡಿತ ಬರುವುದು ಕಹಿಪಾನದ ಪಾತ್ರೆ ನಿಮ್ಮ ಪಾಲಿಗೆ ಅಮಲೇರಿ ಬೆತ್ತಲೆಯಾಗುವ ಗತಿ ಬಂದೇಬರುವುದು ನಿಮಗೆ!
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಎದೋಮಿನ ಪುತ್ರಿಯೇ, ಊಚ್ ದೇಶದಲ್ಲಿ ವಾಸವಾಗಿರುವವಳೇ, ಆನಂದಿಸು ಮತ್ತು ಸಂತೋಷಪಡು; ಆದರೆ ನಿನ್ನ ಬಳಿಗೆ ಪಾತ್ರೆಯು ಸಹ ದಾಟಿ ಬರುವುದು. ನೀನು ಕುಡಿದು, ಬೆತ್ತಲೆಯಾಗಿರುವೆ.