Lamentations 4:8 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಈಗ ಅವರ ಮುಖಗಳು ಕಪ್ಪು ಹೊಗೆಗಿಂತಲೂ ಕಪ್ಪಾಗಿವೆ. ಅವರನ್ನು ಬೀದಿಗಳಲ್ಲಿ ಯಾರೂ ಸಹ ಗುರುತಿಸುವುದಿಲ್ಲ. ಅವರ ಚರ್ಮವು ಅವರ ಮೂಳೆಗಳ ಮೇಲೆ ಸುಕ್ಕುಗೊಂಡಿದೆ. ಅವರ ಚರ್ಮವು ಮರದಂತಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಈಗ ಅವರ ಮುಖವು ಕಾರ್ಮೋಡದಂತೆ ಕಡುಕಪ್ಪಾಗಿದೆ, ಬೀದಿಗಳಲ್ಲಿ ಅವರ ಗುರುತು ಯಾರಿಗೂ ಸಿಕ್ಕದು. ಅವರ ಚರ್ಮವು ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ, ಒಣಗಿದ ಕಟ್ಟಿಗೆಯಂತಾಗಿದೆ.
Kannada BSI Bible 2016
ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
Kannada BSI JV (ಕನ್ನಡ ಸತ್ಯವೇದವು J.V. (BSI))
[ಈಗ] ಅವರ ಮುಖವು ಕಟ್ಟಕರಿದಾಗಿದೆ, ಬೀದಿಗಳಲ್ಲಿ ಅವರ ಗುರುತು ಯಾರಿಗೂ ಸಿಕ್ಕದು. ಅವರ ಚರ್ಮವು ಎಲುಬುಗಳ ಮೇಲೆ ಸುಕ್ಕಿಕೊಂಡಿದೆ, ಒಣಗಿ ಕಟ್ಟಿಗೆಯಾಗಿದೆ.
Kannada Bible (KNCL) BSI 2016
ಈಗ ಅವರ ಮುಖ ಕಾರ್ಮೋಡಕ್ಕಿಂತ ಕಪ್ಪು ಬೀದಿಗಳಲ್ಲಿ ನೋಡುತ್ತಿದ್ದವರಿಗೆ ಅವರ ಗುರುತೂ ಸಿಗದು. ಅವರ ಚರ್ಮ ಎಲುಬುಗಳಿಗೆ ಅಂಟಿಕೊಂಡಿದೆ ಅದಕ್ಕೆ ಸುಕ್ಕು ಹಿಡಿದಿದೆ; ಒಣಗಿ ಕಟ್ಟಿಗೆಯಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆದರೆ ಈಗ ಅವರ ರೂಪವು ಕಲ್ಲಿದ್ದಲಿನಂತೆ ಕಪ್ಪಾಗಿದೆ. ಬೀದಿಗಳಲ್ಲಿ ಅವರು ಯಾರೆಂಬುದು ತಿಳಿಯಲಿಲ್ಲ. ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ. ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.