Leviticus 1:16 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಜಕನು ಪಕ್ಷಿಯ ಕರುಳುಗಳನ್ನು ಮತ್ತು ಗರಿಗಳನ್ನು ತೆಗೆದು ಅವುಗಳನ್ನು ವೇದಿಕೆಯ ಪೂರ್ವದಿಕ್ಕಿನಲ್ಲಿ ಬಿಸಾಡಬೇಕು. ಈ ಸ್ಥಳವು ವೇದಿಕೆಯಿಂದ ತೆಗೆದ ಬೂದಿಯನ್ನು ಹಾಕುವ ಸ್ಥಳವಾಗಿದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದರ ಕರುಳುಗಳನ್ನು ಮತ್ತು ರೆಕ್ಕೆಗಳನ್ನು ತೆಗೆದುಬಿಟ್ಟು ಯಜ್ಞವೇದಿಯ ಪೂರ್ವದಿಕ್ಕಿನಲ್ಲಿರುವ ಬೂದಿಯ ಸ್ಥಳದಲ್ಲಿ ಹಾಕಬೇಕು.
Kannada BSI Bible 2016
ಇದಲ್ಲದೆ ಅವನು ಅದರ ರೆಕ್ಕೆ (ಪುಕ್ಕ)ಗಳೊಂದಿಗೆ ಕರುಳುಗಳನ್ನೂ ಕಿತ್ತು ಯಜ್ಞವೇದಿಯ ಬಳಿ ಪೂರ್ವಭಾಗದಲ್ಲಿ ಬೂದಿ ಯಿರುವ ಸ್ಥಳದಲ್ಲಿ ಬಿಸಾಡಬೇಕು.ಅವನು ಅದನ್ನು ರೆಕ್ಕೆಗಳೊಂದಿಗೆ ಹರಿಯಬೇಕು, ಆದರೆ ಬೇರೆಬೇರೆ ಯಾಗಿ ವಿಭಾಗಿಸಬಾರದು; ಆಗ ಯಾಜಕನು ಅದನ್ನು ಯಜ್ಞವೇದಿಯ ಬೆಂಕಿಮೇಲಿರುವ ಕಟ್ಟಿಗೆಯ ಮೇಲೆ ಸಮರ್ಪಿಸುವ ದಹನಬಲಿ ಹಾಗೆಯೂ ಕರ್ತನಿಗೆ ಸುವಾಸನೆಯಾಗುವಂತೆಯೂ ಸುಡಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದರ ಕರುಳುಗಳನ್ನೂ ಗರಿಗಳನ್ನೂ ತೆಗೆದುಬಿಟ್ಟು ಯಜ್ಞವೇದಿಯ ಪೂರ್ವದಿಕ್ಕಿನಲ್ಲಿರುವ ಬೂದಿಯ ಸ್ಥಳದಲ್ಲಿ ಬೀಸಾಡಬೇಕು.
Kannada Bible (KNCL) BSI 2016
ಅದರ ಕರುಳುಗಳನ್ನೂ, ಗರಿಗಳನ್ನೂ ತೆಗೆದುಬಿಟ್ಟು ಬಲಿಪೀಠದ ಪೂರ್ವದಿಕ್ಕಿನಲ್ಲಿರುವ ಬೂದಿಯ ಎಡೆಯಲ್ಲಿ ಬಿಸಾಡಲಿ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಇದಲ್ಲದೆ ಅವನು ಅದರ ರೆಕ್ಕೆ ಪುಕ್ಕಗಳೊಂದಿಗೆ ಕರುಳುಗಳನ್ನೂ ಕಿತ್ತು, ಬಲಿಪೀಠದ ಬಳಿ ಪೂರ್ವ ಭಾಗದಲ್ಲಿ ಬೂದಿಯಿರುವ ಸ್ಥಳದಲ್ಲಿ ಬಿಸಾಡಬೇಕು.