Leviticus 1:4 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಅವನು ತನ್ನ ಕೈಯನ್ನು ಪ್ರಾಣಿಯ ತಲೆಯ ಮೇಲಿಡಬೇಕು. ಆ ವ್ಯಕ್ತಿಯ ದೋಷಪರಿಹಾರಕ್ಕಾಗಿ ಯೆಹೋವನು ಆ ಸರ್ವಾಂಗಹೋಮವನ್ನು ಸ್ವೀಕರಿಸುವನು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅವನು ಆ ಯಜ್ಞ ಪಶುವಿನ ತಲೆಯ ಮೇಲೆ ಕೈಯಿಡಬೇಕು; ಆಗ ಅದು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವುದಕ್ಕಾಗಿ ಅಂಗೀಕಾರವಾಗುವುದು.
Kannada BSI Bible 2016
ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅವನು ಆ ಪಶುವಿನ ತಲೆಯ ಮೇಲೆ ಕೈಯಿಡಬೇಕು; ಆಗ ಅದು ಅವನಿಗೋಸ್ಕರ ದೋಷಪರಿಹಾರವನ್ನು ಮಾಡುವದಕ್ಕಾಗಿ ಅಂಗೀಕಾರವಾಗುವದು.
Kannada Bible (KNCL) BSI 2016
ಅರ್ಪಿಸುವವನು ಆ ಪ್ರಾಣಿಯ ತಲೆಯ ಮೇಲೆ ಕೈಯಿಡಬೇಕು. ಆಗ ಅದು ಅವನ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಅಂಗೀಕೃತವಾಗುವುದು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ದಹನಬಲಿ ಅರ್ಪಿಸುವವನು ತನ್ನ ಕೈಯನ್ನು ಆ ಪ್ರಾಣಿಯ ತಲೆಯ ಮೇಲೆ ಇಡಬೇಕು. ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವುದು.