Leviticus 10:14 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಮಾತ್ರವಲ್ಲದೆ ನೀನು, ನಿನ್ನ ಪುತ್ರರು ಮತ್ತು ನಿನ್ನ ಹೆಣ್ಣುಮಕ್ಕಳು ಯೆಹೋವನಿಗೆ ನೈವೇದ್ಯವಾಗಿ ನಿವಾಳಿಸಿದ ಎದೆಯ ಭಾಗವನ್ನು ಮತ್ತು ಅರ್ಪಿಸಲ್ಪಟ್ಟ ತೊಡೆಯನ್ನು ತಿನ್ನಬೇಕು. ನೀವು ಅವುಗಳನ್ನು ಪವಿತ್ರಸ್ಥಳದಲ್ಲಿ ತಿನ್ನಬೇಕಾಗಿಲ್ಲ. ಆದರೆ ನೀವು ಅವುಗಳನ್ನು ಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಯಾಕೆಂದರೆ ಅವುಗಳು ಸಮಾಧಾನಯಜ್ಞಗಳಿಂದ ಬಂದವುಗಳಾಗಿವೆ. ಇಸ್ರೇಲರು ಆ ಕಾಣಿಕೆಗಳನ್ನು ದೇವರಿಗಾಗಿ ಕೊಡುತ್ತಾರೆ. ಜನರು ಆ ಪಶುಗಳಲ್ಲಿ ಕೆಲವು ಭಾಗಗಳನ್ನು ತಿನ್ನುತ್ತಾರೆ. ಆದರೆ ಎದೆಯ ಭಾಗವು ನಿಮ್ಮ ಪಾಲಾಗಿರುತ್ತದೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ನೀವು ನೈವೇದ್ಯ ಮಾಡಿದ ಎದೆಯ ಭಾಗವನ್ನು, ಯಾಜಕರಿಗೋಸ್ಕರ ಪ್ರತ್ಯೇಕಿಸಿದ ತೊಡೆಯನ್ನು ಯಾವುದಾದರೂ ಒಂದು ಶುದ್ಧಸ್ಥಳದಲ್ಲಿ ಊಟಮಾಡಬಹುದು. ನೀನೂ, ನಿನ್ನ ಗಂಡುಮಕ್ಕಳೂ ಹಾಗು ಹೆಣ್ಣುಮಕ್ಕಳೂ ಅದನ್ನು ತಿನ್ನಬಹುದು. ಏಕೆಂದರೆ ಇಸ್ರಾಯೇಲರು ಸಮರ್ಪಿಸುವ ಸಮಾಧಾನಯಜ್ಞದ್ರವ್ಯಗಳಲ್ಲಿ ಇವೇ ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ.
Kannada BSI Bible 2016
ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್‌ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ನೈವೇದ್ಯ ಮಾಡಿದ ಎದೆಯ ಭಾಗವನ್ನೂ ಯಾಜಕರಿಗೋಸ್ಕರ ಪ್ರತ್ಯೇಕಿಸಿದ ತೊಡೆಯನ್ನೂ ಯಾವದಾದರೂ ಒಂದು ಶುದ್ಧಸ್ಥಳದಲ್ಲಿ ಊಟಮಾಡಬಹುದು. ನೀನೂ ನಿನ್ನ ಗಂಡುಮಕ್ಕಳೂ ಹೆಣ್ಣು ಮಕ್ಕಳೂ ಅದನ್ನು ತಿನ್ನಬಹುದು. ಯಾಕಂದರೆ ಇಸ್ರಾಯೇಲ್ಯರು ಸಮರ್ಪಿಸುವ ಸಮಾಧಾನಯಜ್ಞದ್ರವ್ಯಗಳಲ್ಲಿ ಇವೇ ನಿನಗೂ ನಿನ್ನ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ.
Kannada Bible (KNCL) BSI 2016
ನೀವು ಯಾಜಕನಿಗೆಂದೇ ಪ್ರತ್ಯೇಕವಾಗಿ ಆರತಿಯೆತ್ತಿ ಅರ್ಪಿಸಿದ ಎದೆಯ ಭಾಗವನ್ನು ಮತ್ತು ತೊಡೆಯನ್ನು ಯಾವುದಾದರೂ ಒಂದು ಶುದ್ಧ ಸ್ಥಳದಲ್ಲಿ ಊಟಮಾಡಬಹುದು. ನೀವೂ ನಿಮ್ಮ ಕುಟುಂಬದವರು ಅದನ್ನು ತಿನ್ನಬಹುದು. ಏಕೆಂದರೆ, ಇಸ್ರಯೇಲರು ಸಮರ್ಪಿಸುವ ಶಾಂತಿಸಮಾಧಾನದ ಬಲಿದ್ರವ್ಯಗಳಲ್ಲಿ ಇವು ನಿಮಗೂ ನಿಮ್ಮ ಮಕ್ಕಳಿಗೂ ಸಲ್ಲಬೇಕೆಂದು ನೇಮಕವಾಗಿದೆ.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ನೀನೂ, ನಿನ್ನೊಂದಿಗೆ ನಿನ್ನ ಪುತ್ರರೂ ನಿನ್ನ ಪುತ್ರಿಯರೂ ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಿಸುವ ತೊಡೆಯ ಭಾಗವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು. ಏಕೆಂದರೆ ಅದು ಇಸ್ರಾಯೇಲರ ಸಮಾಧಾನದ ಬಲಿಗಳಲ್ಲಿ ನಿನಗೂ ನಿನ್ನ ಪುತ್ರರಿಗೂ ಸಲ್ಲುವಂಥವುಗಳಾಗಿವೆ.