Leviticus 10:5 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಮಿಶಾಯೇಲ ಮತ್ತು ಎಲ್ಸಾಫಾನ ಮೋಶೆಯ ಮಾತಿಗೆ ವಿಧೇಯರಾದರು. ಅವರು ನಾದ್ವಾ್ ಮತ್ತು ಅಬೀಹು ಎಂಬವರ ಮೃತಶರೀರಗಳನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋದರು. ನಾದ್ವಾ್ ಮತ್ತು ಅಬೀಹು ತೊಟ್ಟುಕೊಂಡಿದ್ದ ವಿಶೇಷವಾದ ಹೆಣೆದ ಅಂಗಿಗಳು ಇನ್ನೂ ಅವರ ಮೃತಶರೀರಗಳ ಮೇಲಿದ್ದವು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು.
Kannada BSI Bible 2016
ಮೋಶೆಯು ಹೇಳಿದ ಹಾಗೆಯೇ ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು.
Kannada BSI JV (ಕನ್ನಡ ಸತ್ಯವೇದವು J.V. (BSI))
ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆದು ಬಿಡದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು.
Kannada Bible (KNCL) BSI 2016
ಮೋಶೆಯ ಅಪ್ಪಣೆಯ ಮೇರೆಗೆ ಅವರು ಬಂದು ಸತ್ತವರ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಹೊರಕ್ಕೆ ಹೊತ್ತುಕೊಂಡು ಹೋದರು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮೋಶೆಯು ಹೇಳಿದ ಹಾಗೆಯೇ, ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು.