Leviticus 13:19 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಆದರೆ ಹುಣ್ಣಿದ್ದ ಜಾಗದಲ್ಲಿ ಬೆಳ್ಳಗಾದ ಊತವಿದ್ದರೆ ಅಥವಾ ಕೆಂಪುಬಿಳುಪು ಮಿಶ್ರವಾದ ಹೊಳೆಯುವ ಮಚ್ಚೆಯಿದ್ದರೆ, ಚರ್ಮದ ಈ ಭಾಗವನ್ನು ಯಾಜಕನಿಗೆ ತೋರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಅದು ಇದ್ದ ಸ್ಥಳದಲ್ಲಿ ಬಿಳಿ ಬಾವಾಗಲಿ ಅಥವಾ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
Kannada BSI Bible 2016
ಆ ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಅದು ಇದ್ದ ಸ್ಥಳದಲ್ಲಿ ಬಿಳೀ ಬಾವಾಗಲಿ ಕೆಂಪು ಬಿಳುಪು ವಿುಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
Kannada Bible (KNCL) BSI 2016
ವಾಸಿಯಾದ ಮೇಲೆ ಅದು ಇದ್ದ ಸ್ಥಳದಲ್ಲಿ ಬಿಳೀ ಬಾವಾಗಲಿ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಕಂಡುಬಂದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆ ಹುಣ್ಣಿನ ಜಾಗದಲ್ಲಿ ಬಿಳಿಯ ಊತವಾಗಲಿ ಇಲ್ಲವೆ ಬಿಳುಪಾದ ಮಚ್ಚೆಯಾಗಲಿ, ಕೆಂಪು ಮಿಶ್ರಿತ ಕಲೆ ಉಂಟಾದರೆ ಅದನ್ನು ಯಾಜಕನಿಗೆ ತೋರಿಸಬೇಕು.