Leviticus 13:3 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡಬೇಕು. ಮಚ್ಚೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಮಚ್ಚೆಯು ಅವನ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗವಾಗಿದೆ. ಯಾಜಕನು ಅವನನ್ನು ಪರೀಕ್ಷಿಸಿದ ನಂತರ ಆ ವ್ಯಕ್ತಿಯನ್ನು ಅಶುದ್ಧನೆಂದು ಪ್ರಕಟಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿದ್ದರೆ ಮತ್ತು ಆ ಮಚ್ಚೆ ಉಳಿದ ಚರ್ಮಕ್ಕಿಂತ ಆಳವಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
Kannada BSI Bible 2016
ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ನೋಡುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿಹೋಗಿದ್ದರೆ ಮತ್ತು ಆ ಮಚ್ಚೆ ವಿುಕ್ಕ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು.
Kannada Bible (KNCL) BSI 2016
ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸಬೇಕು. ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಮಚ್ಚೆ ಮಿಕ್ಕ ಚರ್ಮಕ್ಕಿಂತ ತಗ್ಗಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಆ ವ್ಯಕ್ತಿಯನ್ನು ಅಶುದ್ಧನೆಂದು ನಿರ್ಣಯಿಸಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಯಾಜಕನು ಚರ್ಮದ ಮೇಲಿರುವ ವ್ಯಾಧಿಯನ್ನು ಪರೀಕ್ಷಿಸಬೇಕು. ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ, ಆ ವ್ಯಾಧಿಯು ಅವನ ಚರ್ಮಕ್ಕಿಂತಲೂ ಆಳವಾಗಿ ಕಂಡರೆ, ಅದು ಚರ್ಮರೋಗವಾಗಿರುವುದು. ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು.