Leviticus 14:10 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಎಂಟನೆಯ ದಿನದಲ್ಲಿ ಅವನು ಯಾವ ದೋಷವಿಲ್ಲದ ಎರಡು ಟಗರುಗಳನ್ನೂ ಒಂದು ವರ್ಷದ ಹೆಣ್ಣು ಕುರಿಮರಿಯನ್ನೂ ಎಣ್ಣೆ ಬೆರೆಸಿದ ಇಪ್ಪತ್ತನಾಲ್ಕು ಬಟ್ಟಲು ಶ್ರೇಷ್ಠ ಗೋಧಿಹಿಟ್ಟನ್ನೂ ತೆಗೆದುಕೊಂಡು ಬರಬೇಕು. ಈ ಶ್ರೇಷ್ಠ ಗೋಧಿಹಿಟ್ಟು ಧಾನ್ಯನೈವೇದ್ಯಕ್ಕಾಗಿರುತ್ತದೆ. ಅವನು ಒಂದು ಸೇರು ಆಲಿವ್ ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನು, ಪೂರ್ಣಾಂಗವಾದ ಒಂದು ವರ್ಷದ ಕುರಿಯನ್ನು, ನೈವೇದ್ಯಕ್ಕಾಗಿ ಎಣ್ಣೆ ಬೆರೆಸಿದ ಒಂಭತ್ತು ಸೇರು ಗೋದಿಹಿಟ್ಟನ್ನು ಮತ್ತು ಒಂದು ಸೇರು ಎಣ್ಣೆಯನ್ನು ತೆಗೆದುಕೊಂಡು ಬರಬೇಕು.
Kannada BSI Bible 2016
ಎಂಟನೆಯ ದಿವಸದಲ್ಲಿ ಅವನು ದೋಷವಿಲ್ಲದ ಎರಡು ಕುರಿಮರಿ ಗಳನ್ನು ಒಂದು ವರುಷದ ದೋಷವಿಲ್ಲದ ಹೆಣ್ಣು ಕುರಿಯನ್ನು ಆಹಾರ ಸಮರ್ಪಣೆಗಾಗಿ ಹತ್ತರಲ್ಲಿ ಮೂರರಷ್ಟು ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು.
Kannada BSI JV (ಕನ್ನಡ ಸತ್ಯವೇದವು J.V. (BSI))
ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನೂ ಪೂರ್ಣಾಂಗವಾದ ಒಂದು ವರುಷದ ಕುರಿಯನ್ನೂ ನೈವೇದ್ಯಕ್ಕಾಗಿ ಎಣ್ಣೇ ಕಲಸಿದ ಒಂಭತ್ತು ಸೇರು ಗೋದಿಹಿಟ್ಟನ್ನೂ ಒಂದು ಸೇರು ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು.
Kannada Bible (KNCL) BSI 2016
ಎಂಟನೆಯ ದಿನದಲ್ಲಿ ಅವನು ಪೂರ್ಣಾಂಗವಾದ ಎರಡು ಟಗರುಗಳನ್ನೂ ಪೂರ್ಣಾಂಗವಾದ ಒಂದು ವರುಷದ ಕುರಿಯನ್ನೂ ನೈವೇದ್ಯಕ್ಕಾಗಿ ಎಣ್ಣೆ ಕಲಸಿದ ಒಂಬತ್ತು ಸೇರು ಗೋಧಿಹಿಟ್ಟನ್ನೂ ಒಂದು ಸೇರು ಎಣ್ಣೆಯನ್ನೂ ತೆಗೆದುಕೊಂಡು ಬರಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಎಂಟನೆಯ ದಿವಸದಲ್ಲಿ ಅವನು ಕಳಂಕರಹಿತವಾದ ಎರಡು ಕುರಿಮರಿಗಳನ್ನು ಮತ್ತು ಒಂದು ವರುಷದ ಕಳಂಕರಹಿತವಾದ ಹೆಣ್ಣು ಕುರಿಯನ್ನು, ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಐದು ಕಿಲೋಗ್ರಾಂ ಗೋಧಿ ಹಿಟ್ಟನ್ನು, ಒಂದನೆಯ ಮೂರು ಭಾಗ ಎಣ್ಣೆಯನ್ನು ತೆಗೆದುಕೊಳ್ಳಬೇಕು.