Leviticus 15:2 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
“ಇಸ್ರೇಲರಿಗೆ ಹೀಗೆ ಹೇಳಿರಿ: ಒಬ್ಬನ ದೇಹದಿಂದ ಸ್ರಾವವಾದಾಗ ಆ ವ್ಯಕ್ತಿ ಅಶುದ್ಧನಾಗಿದ್ದಾನೆ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
“ನೀವು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ, ‘ಒಬ್ಬನ ಜನನೇಂದ್ರಿಯದಲ್ಲಿ ಮೇಹಸ್ರಾವವಾದರೆ ಅದರಿಂದ ಅವನು ಅಶುದ್ಧನಾಗುವನು.
Kannada BSI Bible 2016
ಇಸ್ರಾ ಯೇಲಿನ ಮಕ್ಕಳೊಂದಿಗೆ ಹೇಳಬೇಕಾದದ್ದೇನಂದರೆಯಾವ ಮನುಷ್ಯನಿಗಾದರೂ ಅವರ ಶರೀರದಲ್ಲಿ ಮೇಹಸ್ರಾವ ಇರುವದಾಗಿದ್ದರೆ ಆ ಸ್ರಾವದ ನಿಮಿತ್ತ ವಾಗಿ ಅವನು ಅಶುದ್ಧನಾಗಿರುವನು.
Kannada BSI JV (ಕನ್ನಡ ಸತ್ಯವೇದವು J.V. (BSI))
ನೀವು ಇಸ್ರಾಯೇಲ್ಯರಿಗೆ ಆಜ್ಞಾಪಿಸಬೇಕಾದದ್ದೇನಂದರೆ - ಒಬ್ಬನ ರಹಸ್ಯಾಂಗದಲ್ಲಿ ಮೇಹಸ್ರಾವವಾದರೆ ಅದರ ದೆಸೆಯಿಂದ ಅವನು ಅಶುದ್ಧನಾಗುವನು.
Kannada Bible (KNCL) BSI 2016
“ನೀವು ಇಸ್ರಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ - ಒಬ್ಬ ವ್ಯಕ್ತಿಯ ಜನನೇಂದ್ರಿಯದಿಂದ ಮೇಹಸ್ರಾವವಾದರೆ ಆ ಕಾರಣ ಆ ವ್ಯಕ್ತಿ ಅಶುದ್ಧನು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
“ಇಸ್ರಾಯೇಲರೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು: ‘ಒಬ್ಬ ಪುರುಷನ ಶರೀರದಿಂದ ಮೇಹಸ್ರಾವ ಹರಿಯುವುದಾಗಿದ್ದರೆ, ಆ ಸ್ರಾವದ ನಿಮಿತ್ತವಾಗಿ ಅವನು ಅಶುದ್ಧನಾಗಿರುವನು.