Leviticus 15:33 — Compare Translations
6 translations compared side by side
Kannada (ERV) 1997 (ಪರಿಶುದ್ದ ಬೈಬಲ್)
ತಮ್ಮ ತಿಂಗಳ ಮುಟ್ಟಿನಿಂದ ಅಶುದ್ಧರಾಗುವ ಸ್ತ್ರೀಯರು, ಸ್ರಾವವಾಗುವ ಗಂಡಸರು ಮತ್ತು ಸ್ತ್ರೀಯರು ಅನುಸರಿಸಬೇಕಾದ ನಿಯಮಗಳು ಇವುಗಳೇ. ಅಶುದ್ಧಳಾದ ಸ್ತ್ರೀಯೊಡನೆ ಮಲಗುವುದರಿಂದ ಅಶುದ್ಧನಾಗುವ ಯಾವನಾದರೂ ಅನುಸರಿಸಬೇಕಾದ ನಿಯಮಗಳು ಇವುಗಳೇ.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಮುಟ್ಟಾದ ಸ್ತ್ರೀಯು, ಸ್ರಾವವುಂಟಾಗುವ ಸ್ತ್ರೀ ಮತ್ತು ಪುರುಷರು, ಅಶುದ್ಧಳಾದ ಸ್ತ್ರೀಯನ್ನು ಸಂಗಮಿಸಿದವನು ಇವರ ವಿಷಯವಾಗಿ ಇದೇ ನಿಯಮ’” ಎಂದು ಹೇಳಿದನು.
Kannada BSI Bible 2016
ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
Kannada BSI JV (ಕನ್ನಡ ಸತ್ಯವೇದವು J.V. (BSI))
ಮುಟ್ಟಾದ ಸ್ತ್ರೀಯು, ಸ್ರಾವವುಂಟಾಗುವ ಸ್ತ್ರೀಪುರುಷರು, ಅಶುದ್ಧಳಾದ ಸ್ತ್ರೀಯನ್ನು ಸಂಗವಿುಸಿದವನು ಇವರ ವಿಷಯವಾಗಿ ಇದೇ ವಿಧಿ.
Kannada Bible (KNCL) BSI 2016
ಮುಟ್ಟಾದ ಮಹಿಳೆ ಸ್ರಾವವುಂಟಾಗುವ ಸ್ತ್ರೀ ಪುರುಷರು ಹಾಗು ಅಶುದ್ಧಳಾದ ಮಹಿಳೆಯನ್ನು ಸಂಗಮಿಸಿದವನು ಇವರ ವಿಷಯವಾದ ನಿಯಮಗಳು ಇವು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಮುಟ್ಟು ಇರುವವಳಿಗೂ, ಸ್ರಾವವಿರುವ ಪುರುಷನಿಗೂ ಸ್ತ್ರೀಗೂ, ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮ ಇದೆ.