Leviticus 16:8 — Compare Translations

6 translations compared side by side

Kannada (ERV) 1997 (ಪರಿಶುದ್ದ ಬೈಬಲ್‌)
ಆರೋನನು ಚೀಟುಹಾಕಿ ಒಂದು ಹೋತವನ್ನು ಯೆಹೋವನಿಗಾಗಿಯೂ ಇನ್ನೊಂದನ್ನು ಅಜಾಜೇಲನಿಗಾಗಿಯೂ ಎಂದು ನಿರ್ಧರಿಸಬೇಕು.
Kannada 2019 (ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019)
ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
Kannada BSI Bible 2016
ಆರೋನನು ಆ ಎರಡು ಆಡುಗಳಿಗಾಗಿ ಚೀಟು ಹಾಕಬೇಕು; ಒಂದು ಚೀಟು ಕರ್ತನಿಗೋಸ್ಕರ ಮತ್ತೊಂದು ಚೀಟು ಪಾಪ ಪಶುವಿ ಗೋಸ್ಕರ.
Kannada BSI JV (ಕನ್ನಡ ಸತ್ಯವೇದವು J.V. (BSI))
ಆಗ ಅವನು ಆ ಹೋತಗಳ ವಿಷಯವಾಗಿ ಯೆಹೋವನಿಗೋಸ್ಕರವೆಂದೂ ಅಜಾಜೇಲನಿಗೋಸ್ಕರವೆಂದೂ ಚೀಟುಗಳನ್ನು ಬರೆದುಹಾಕಬೇಕು.
Kannada Bible (KNCL) BSI 2016
ಆಗ ಅವನು ಆ ಹೋತಗಳಲ್ಲಿ ಯಾವುದು ಸರ್ವೇಶ್ವರನಿಗೆ, ಯಾವುದು ಅಜಾಜೇಲನಿಗೆ ಎಂದು ತಿಳಿದುಕೊಳ್ಳಲು ದಾಳಹಾಕಬೇಕು.
Kannada KSB 2022 (ಕನ್ನಡ ಸಮಕಾಲಿಕ ಅನುವಾದ)
ಆರೋನನು ಆ ಎರಡು ಹೋತಗಳಿಗಾಗಿ ಚೀಟುಹಾಕಬೇಕು. ಒಂದು ಚೀಟು ಯೆಹೋವ ದೇವರಿಗೋಸ್ಕರ, ಮತ್ತೊಂದು ಚೀಟು ಬಲಿಪಶುವಿಗೋಸ್ಕರ.